ಕಾರ್ಕಳದಲ್ಲಿ ಸ್ಕೂಟಿಗೆ ಬೈಕ್‌ ಡಿಕ್ಕಿ – ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರ್ಕಳ : ನಗರದ ಸರ್ವಜ್ಞ ವೃತ್ತ ಬಳಿ, ಹೊಟೇಲ್‌ ಜೈನ್‌ ಮುಂಭಾಗ ಸ್ಕೂಟಿಗೆ ಬೈಕ್‌ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದು, ಪರಿಣಾಮ ಸ್ಕೂಟಿ ಸಹ ಸವಾರ ಕುಕ್ಕುಂದೂರು ಗ್ರಾಮದ ನಕ್ರೆ ನಿವಾಸಿ ಜಾರ್ಜ್‌ ಗಾಯಗೊಂಡಿರುತ್ತಾರೆ. ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಸ್ಕೂಟಿ ಸವಾರ ಕುಕ್ಕೂಂದೂರು ಗ್ರಾಮದ ಆಂಟೋನಿ ಹಾಗೂ ಬೈಕ್‌ ಸವಾರ ಅದೇ ಗ್ರಾಮದ ವಿಘ್ನೇಶ್‌ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್‌ ಕೆಲವು ಮೀಟರ್‌ ದೂರ ಸಾಗಿ ಬಿದ್ದಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.































































































































































error: Content is protected !!
Scroll to Top