ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು 169ನೇ ಜನ್ಮದಿನೋತ್ಸವ

ಕಾರ್ಕಳ : ಬ್ರಹ್ಮಶ್ರೀ ನಾರಾಯಣ ಗುರುಗಳು ಶತಶತಮಾನಗಳಿಂದ ತುಳಿತಕ್ಕೊಳಗಾದ ಜನರ ಅಭ್ಯುದಯದ ಹರಿಕಾರ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ ಸಾಮಾಜಿಕ ಮೌಢ್ಯಗಳನ್ನು ಹೊಡೆದೋಡಿಸಲು ಸಾಧ್ಯ ಎಂದ ಅವರ ವೈಜ್ಞಾನಿಕ ಚಿಂತನೆ ವರ್ಣಾಶ್ರಮ ಧರ್ಮದ ವಿರುದ್ಧವಾಗಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ. ಅವರು ಆ. 31ರಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಪ್ರಸ್ಥಾವನೆ ಗೈದು, ಅವರು ಹುಟ್ಟು ಹಾಕಿದ ಸರ್ವಧರ್ಮ ಸಮನ್ವಯತೆಯ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದರು. ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಿ.ಆರ್ ರಾಜು, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಕೆಪಿಸಿಸಿ ಕೃಷಿ ಘಟಕದ ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಕುಕ್ಕುಂದೂರು ಗ್ರಾ. ಪಂ. ಉಪಾಧ್ಯಕ್ಷೆ ಶಶಿಕಲಾ ಸಂತೋಷ್, ಮಾಜಿ ಉಪಾಧ್ಯಕ್ಷ ಅನಿಲ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್, ಬ್ಲಾಕ್ ಉಪಾಧ್ಯಕ್ಷ ಜೋಜ್೯ ಕ್ಯಾಸ್ತಲೀನೋ, ಪುರಸಭಾ ಸದಸ್ಯ ಸೀತಾರಾಮ್ ರಾವ್, ಕುಕ್ಕುಂದೂರು ಗ್ರಾ. ಪಂ. ಸದಸ್ಯ ವಿಶ್ವನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಕೋಟ್ಯಾನ್, ಸುನೀಲ್ ಭಂಡಾರಿ, ಐವಾನ್ ಮಿರಾಂದ, ರಾಘವ ದೇವಾಡಿಗ, ಪ್ರಕಾಶ ಆಚಾರ್ಯ, ಪ್ರವೀಣ್ ಸುವರ್ಣ, ಮಹಿಳಾ ಕಾರ್ಯದರ್ಶಿ ಶೋಭಾ, ಆಶಾ ಶೆಟ್ಟಿ, ಯಶೋಧಾ ಆಚಾರ್ಯ, ಜೋಕಿಮ್ ಪಿಂಟೋ, ದೀಪಕ್, ಸತೀಷ್ ರಾವ್, ಪ್ರವೀಣ್ ಮಾಭಿಯಾನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ವಂದನಾರ್ಪಣೆ ಗೈದರು.

















































error: Content is protected !!
Scroll to Top