ಹೆಬ್ರಿ ಗ್ರಾ. ಪಂ. ಅಧ್ಯಕ್ಷರಾಗಿ ತಾರನಾಥ ಬಂಗೇರ, ಉಪಾಧ್ಯಕ್ಷರಾಗಿ ಸುಪ್ರೀಯಾ

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಆ. 17 ರಂದು ನಡೆಯಿತು. ಅಧ್ಯಕ್ಷರಾಗಿ ತಾರನಾಥ ಬಂಗೇರ, ಉಪಾಧ್ಯಕ್ಷರಾಗಿ ಸುಪ್ರೀಯಾ ಆಯ್ಕೆಯಾಗಿದ್ದಾರೆ.

16 ಮಂದಿ ಸದಸ್ಯರಿರುವ ಹೆಬ್ರಿ ಪಂಚಾಯತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಸಮಬಲದಲ್ಲಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆಗೆ ಒಲಿದಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ತಾರನಾಥ ಬಂಗೇರ ಹಾಗೂ ಕಾಂಗ್ರೆಸ್‌ ಬೆಂಬಲಿತ-ಜನಾರ್ಧನ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ತಲಾ 8 ಮತಗಳನ್ನು ಪಡೆದಿದ್ದರು. ನಂತರ ಚೀಟಿ ತೆಗೆಯುವ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗೆಲುವು ಬಿಜೆಪಿ ಬೆಂಬಲಿತ ತಾರನಾಥ ಬಂಗೇರ ಅವರ ಪಾಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸುಪ್ರೀತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.















































































error: Content is protected !!
Scroll to Top