ಗಾಳಿ ಮಳೆಗೆ ಕಾರ್ಕಳ ತಾಲೂಕಿನ ವಿವಿಧೆಡೆ ಹಾನಿ

ಕಾರ್ಕಳ : ಜು. 18ರ ಸಂಜೆ ಮತ್ತು ಜು. 19ರ ಬೆಳಿಗ್ಗೆ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಹಾನಿ ಸಂಭವಿಸಿದೆ. ಮಂಗಳವಾರ ಸಂಜೆ ಬೀಸಿದ ಗಾಳಿ ಮಳೆಗೆ ನಲ್ಲೂರು ಗ್ರಾಮದ ರಾಮ ಸಾಲಿಯಾನ್‌ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಂದಾಜು 20 ಸಾವಿರ ರೂ. ನಷ್ಟ ಉಂಟಾಗಿದೆ. ಬುಧವಾರ ಬೆಳಿಗ್ಗೆ ಸುರಿದ ಮಳೆಗೆ ಕಣಂಜಾರು ಗ್ರಾಮದ ಕಲ್ಯಾಣಿ ನಾಯಕ್‌ ಅವರ ಮನೆ ಹಾನಿಗೀಡಾಗಿದ್ದು, ಅಂದಾಜು 20 ಸಾವಿರ ರೂ. ನಷ್ಟ ಉಂಟಾಗಿದೆ. ರೆಂಜಾಳ ಗ್ರಾಮದ ಸುಭಾಶ್ಚಂದ್ರ ಜೈನ್‌ ಅವರ ಮನೆ ಮೇಲೆ ಮರ ಬಿದ್ದ ಪರಿಣಾಮವಾಗಿ ಅಂದಾಜು 20 ಸಾವಿರ ರೂ. ನಷ್ಟ ಉಂಟಾಗಿದೆ. ದುರ್ಗಾ ಗ್ರಾಮದ ಮಲೆಬೆಟ್ಟು ತನಿಯಪ್ಪ ಮೇರಾ ಅವರ ಮನೆಗೆ ಮರ ಬಿದ್ದು ಅಂದಾಜು 30 ಸಾವಿರ ರೂ. ನಷ್ಟ ಸಂಭವಿಸಿದೆ.

ನಲ್ಲೂರು ಗ್ರಾಮದ ರಾಮ ಸಾಲಿಯಾನ್‌ ಅವರ ಮನೆಯ ಮೇಲೆ ಬಿದ್ದ ತೆಂಗಿನ ಮರ
ಮಳೆಗೆ ಹಾನಿಗೀಡಾದ ಕಣಂಜಾರು ಗ್ರಾಮದ ಕಲ್ಯಾಣಿ ನಾಯಕ್‌
ರೆಂಜಾಳ ಗ್ರಾಮದ ಸುಭಾಶ್ಚಂದ್ರ ಜೈನ್‌ ಅವರ ಮನೆ ಮೇಲೆ ಮರ ಬಿದ್ದು ಹಾನಿ
ದುರ್ಗಾ ಗ್ರಾಮದ ಮಲೆಬೆಟ್ಟು ತನಿಯಪ್ಪ ಮೇರಾ ಅವರ ಮನೆ ಮೇಲೆ ಮರ ಬಿದ್ದು ಹಾನಿ












































































error: Content is protected !!
Scroll to Top