ಜಯಂತಿನಗರ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

ಗುರುಗಳಿಗೆ ಗೌರವಿಸಿದಾಗ ಮಾತ್ರ ಕಲಿತ ವಿದ್ಯೆ ಸಾರ್ಥಕವಾಗುತ್ತದೆ – ಕೆ. ಕಮಲಾಕ್ಷ ಕಾಮತ್

ಕಾರ್ಕಳ : ‌ನಿವೃತ್ತ ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್ ಹಾಗೂ ಅಮ್ಮನ‌ ನೆರವು ಟ್ರಸ್ಟ್ ವತಿಯಿಂದ ಜು. 19 ರಂದು ಜಯಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಕೊಡೆ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಕೆ. ಕಮಲಾಕ್ಷ ಕಾಮತ್, ಜೀವನದಲ್ಲಿ ಬಾಲ್ಯ ಶ್ರೇಷ್ಠವಾದದ್ದು. ಈ ಹಂತದಲ್ಲೇ ಸಂಸ್ಕಾರ, ಸಂಸ್ಕೃತಿ ಮತ್ತು ಉತ್ತಮ ಗುಣ ನಡವಳಿಕೆಯನ್ನು ಮೈಗೂಡಿಸಿಕೊಂಡಾಗ ಭವಿಷ್ಯ ಉಜ್ವಲವಾಗಿರುತ್ತದೆ. ಅಲ್ಲದೆ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವಿಸಿದಾಗ ಮಾತ್ರ ಕಲಿತ ವಿದ್ಯೆ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭ ಅಮ್ಮನ ನೆರವು ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಜೆಸಿಂತ ಜ್ಯೀತಿ ದಾಂತೆ, ಇಸಿಒ ಬಾಲಕೃಷ್ಣ, ಜ್ಯೋತಿ ಜೆ. ಪೈ, ಎಸ್‌ಡಿಎಂಸಿ ಅಧ್ಯಕ್ಷೆ ಶಶಿಕಲಾ ರಾವ್‌, ಮಾಜಿ ಅಧ್ಯಕ್ಷ ಪ್ರತಾಪ್, ಹೊಸ ಸಂಜೆ ಬಳಗದ ದೇವರಾಯ ಪ್ರಭು, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿ ವೆಲಂಕರ್ ಕಾರ್ಯಕ್ರಮ ನಿರ್ವಹಿಸಿದರು. ನಾಗರತ್ನ ಸಹಕರಿಸಿದರು.

































































































error: Content is protected !!
Scroll to Top