ಕಾರ್ಕಳ : ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡಿರುವ ಘಟನೆ ಹಿರ್ಗಾನ ಗ್ರಾಮದ ಕೊರಳ ದರ್ಖಾಸ್ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಕಾರ್ಕಳದ ಬಟ್ಟೆ ಮಳಿಗೆ ಸಿಬ್ಬಂದಿ ಮಮತಾ ಎಂಬವರು ರಾತ್ರಿ ಕೆಲಸ ಮುಗಿಸಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಬೈಕ್ ಮಮತಾ ಅವರ ಕೈಗೆ ತಾಗಿಕೊಂಡು ಹೋಗಿ ಅವರ ಹಿಂದಿನಿಂದ ಬರುತ್ತಿದ್ದ ದೊಡ್ಡಪ್ಪ ಗೋಪಾಲ ನಾಯ್ಕ್ ಅವರಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಗೋಪಾಲ ನಾಯ್ಕ್ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಆದಿತ್ಯ ಎಂಬಾತನೂ ಬೈಕ್ ಸಮೇತ ರಸ್ತೆ ಬಿದ್ದಿದ್ದಾನೆ. ಸ್ಥಳೀಯರು ಅವರನ್ನು ಉಪಚರಿಸಿ ಆಸ್ಪತ್ರೆಗೆ ಒಯ್ದಿದ್ದಾರೆ. ಗೋಪಾಲ ನಾಯ್ಕ್ ಅವರ ಎಡಕಾಲು ಮತ್ತು ಎಡಕೈ ಜಖಂ ಆಗಿದೆ. ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































