ಹಣ ಕೊಡದಿದ್ದಕ್ಕೆ ರೀಪಿನಿಂದ ಹಲ್ಲೆ

ಹೆಬ್ರಿ : ಹಣ ಸಾಲ ಕೇಳಿದಾಗ ಕೊಡದ ಸಿಟ್ಟಿನಲ್ಲಿ ವರಂಗ ಗ್ರಾಮ ಮುನಿಯಾಲಿನ ರಾಜಪಲ್ಕೆಯ ದಿನೇಶ ಪೂಜಾರಿ ಎಂಬವರ ಮೇಲೆ ಅವರ ಪರಿಚಯದ ಕಿರಣ ನಾಯ್ಕ ಎಂಬಾತ ಮರದ ರೀಪಿನಿಂದ ಹಲ್ಲೆ ಮಾಡಿದ ಘಟನೆ ಜೂ. 29 ರಂದು ಸಂಭವಿಸಿದೆ. ದಿನೇಶ ಪೂಜಾರಿ ಅವರ ಬಳಿ ಮುನಿಯಾಲು ಮಾರಿಗುಡಿ ದ್ವಾರದ ಸಮೀಪ ಕಿರಣ್‌ ನಾಯ್ಕ ಹಣ ಕೇಳಿದ್ದಾನೆ. ದಿನೇಶ್ ಪೂಜಾರಿ ಹಣ ಇಲ್ಲ ಎಂದಾಗ ಕುತ್ತಿಗೆ ಹಿಡಿದು ದೂಡಿ ರೀಪಿನಿಂದ ಹಲ್ಲೆ ಮಾಡಿದ್ದಾನೆ.‌ ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.







































































error: Content is protected !!
Scroll to Top