ಹೆಬ್ರಿ : ಆಗುಂಬೆ ಘಾಟಿಯಲ್ಲಿ ಬಸ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಬ್ರಹ್ಮಾವರ ತಾಲೂಕಿನ ಶಶಾಂಕ್ (22) ಎಂಬವರೇ ದಾರುಣವಾಗಿ ಸಾವಿಗೀಡಾದ ಯುವಕ. ಶಶಾಂಕ್ ಆತನ ಸಂಬಂಧಿಕಳ ಜೊತೆ ಆಗುಂಬೆ ಕಡೆಯಿಂದ ಹೆಬ್ರಿ ಮೂಲಕ ಬ್ರಹ್ಮಾವರ ತೆರಳುತ್ತಿದ್ದ ಎಂದು ಹೇಳಲಾಗುತ್ತಿದೆ. ಆಗುಂಬೆಯ 2 ನೇ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































