ಜೈನ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಕಳ : ಶಾಸಕರಾಗಿ, ಸಚಿವರಾಗಿ ಸುನಿಲ್ ಕುಮಾರ್ ಅವರು ಜೈನ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸುನಿಲ್ ಕುಮಾರ್ ಅವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಅಭಿಪ್ರಾಯಪಟ್ಟರು. ಅವರು ಜೂ. 18ರಂದು ಅತಿಶಯ ಕ್ಷೇತ್ರ ನಲ್ಲೂರು ಬಸದಿಯಲ್ಲಿ ಜೈನ ಸಮಾಜದ ವತಿಯಿಂದ ಸುನಿಲ್ ಕುಮಾರ್ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿ ಮಹಾವೀರ ಹೆಗ್ಡೆ ಮಾತನಾಡಿ, ಬಿಜೆಪಿ ಕ್ಷೇತ್ರಾಧ್ಯಕ್ಷನಾಗಿ ಚುನಾವಣೆ ಸಂದರ್ಭ ನನ್ನ ಜವಾಬ್ದಾರಿಯೂ ಬಹಳಷ್ಟಿತ್ತು. ಸುನಿಲ್ ಕುಮಾರ್ ಅವರ ಗೆಲುವಿಗಾಗಿ ಜೈನ ಸಮಾಜ ಬಾಂಧವರೂ ಶಕ್ತಿ ಮೀರಿ ಶ್ರಮಿಸಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನೇಮಿರಾಜ ಆರಿಗ ಮಾತನಾಡಿ, ಚುನಾವಣಾ ವೇಳೆ ಜೈನ ಸಮಾಜದ 700-800 ಮನೆಗಳಿಗೆ ಭೇಟಿ ನೀಡಿ ಸುನೀಲ್ ಕುಮಾರ್ ಅವರ ಕಾರ್ಯದ ಬಗ್ಗೆ ಮನದಟ್ಟು ಮಾಡಿದ್ದೇವೆ. ಅಲ್ಪಸಂಖ್ಯಾತರ ಯೋಜನೆಯ ಮೂಲಕ ಕಾರ್ಕಳ ಕ್ಷೇತ್ರಕ್ಕೆ ಸುನಿಲ್ ಕುಮಾರ್ 25 ಕೋಟಿ ರೂ. ಅನುದಾನ ತರಿಸಿದ್ದಾರೆ. ಜೈನ ಸಮಾಜಕ್ಕಾಗಿ ಸುನಿಲ್ ಕುಮಾರ್ ಅವರ ಕೊಡುಗೆ ಅಪಾರ ಹಾಗೂ ಶ್ಲಾಘನೀಯವೆಂದರು.
ಸಮುದಾಯ ಅಭಿವೃದ್ಧಿಗೊಂಡಲ್ಲಿ ಸಮಾಜ ಅಭಿವೃದ್ಧಿಯಾಗುವುದು. ಕಾರ್ಕಳ ಕ್ಷೇತ್ರದ ಇತಿಹಾಸವನ್ನು ಅವಲೋಕನ ಮಾಡಿದಾಗ ಬಹಳ ಸದೀರ್ಘ ಕಾಲ ಆಳ್ವಿಕೆ ಮಾಡಿರುವ ಜೈನ ಸಮುದಾಯದ ಅರಸರ ಕೊಡುಗೆ ಅಪಾರ. ಚುನಾವಣೆಯ ಸಂದರ್ಭ ಹಲವಾರು ಒಳ್ಳೆಯ ಸಂಗತಿಗಳನ್ನು ಅಳವಡಿಸಿಕೊಂಡು ರಾಜಕೀಯವಾಗಿ ನಾನು ಮುಂದುವರೆಯಲು ಸಹಕರಿಸಿದ ಸಮುದಾಯದವರನ್ನು ನಾನು ಎಂದಿಗೂ ಮರೆಯುವುದಿಲ್ಲ. ಶಾಸಕನಾಗಿ ಎಲ್ಲ ಸಮುದಾಯದವರನ್ನು ಒಟ್ಟಾಗಿ ಸೇರಿಸಿಕೊಂಡು ಕಾರ್ಕಳವನ್ನು ಮಾದರಿ ಕ್ಷೇತ್ರವನ್ನಾಗಿ ಮಾರ್ಪಾಡಿಸುತ್ತೇನೆ ಎಂದು ಸುನಿಲ್ ಕುಮಾರ್ ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
2022-23ನೇ ಸಾಲಿನ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಾದ ಅರ್ಘ್ಯಾ ಜೈನ್ 96.32%, ಸಂಪ್ರತಿ ಜೈನ್ 94.86%, ಅನನ್ಯ ಜೈನ್ 93.28%, ನಮೃತಾ ಜೈನ್ 96.64% ನಂದಾ ಅಧಿಕಾರಿ 90% ಮತ್ತು ಸಮೃದ್ಧ್ 91% ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಮಾನ್ಯ ಜೈನ್ 99%, ಪ್ರಾರ್ಥನಾ ಜೈನ್ 96.56%, ವೃದ್ಧಿ ಜೈನ್, 96.33%, ಸ್ತುತಿ ಜೈನ್ 97.66%, ಐಶ್ವರ್ಯ ಜೈನ್ 94.67%, ಅಭಿಷಾ ಜೈನ್ 93.83%, ಪ್ರತಿಷ್ಠಾ ಜೈನ್ 93%, ಪದ್ಮಶ್ರೀ 91.83%, ಆಕಾಶ್ ಜೈನ್ 95% ಹಾಗೂ ಕಲರ್ಸ್ ಕನ್ನಡ ವಾಹಿನಿಯ ಹಲವಾರು ಧಾರವಾಹಿಗಳಿಗೆ ಸಂಭಾಷಣೆಯನ್ನು ಬರೆದು ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ಪಡೆದಿರುವ ಪದ್ಮಿನಿ ಜೈನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಲ್ಲೂರು ಬಸದಿಯ ಆಡಳಿತ ಮೊಕ್ತೇಸರ ವಜ್ರನಾಭ ಚೌಟ ಅಧ್ಯಕ್ಷತೆ ವಹಿಸಿದರು. ಕೂಷ್ಮಾಂಡಿನಿ ಪ್ರಸಾದ್‌ನ ಶಾಂತಿರಾಜ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಶ್ವರ್ಯ ಮತ್ತು ವೃದ್ಧಿ ಜೈನ್ ಪ್ರಾರ್ಥಿಸಿ, ಜಿನೇಶ್ ಜೈನ್ ಸ್ವಾಗತಿಸಿದರು. ಭರತ್ ಜೈನ್ ಅಭಿನಂದನಾ ಪತ್ರ ವಾಚಿಸಿದರು. ಸ್ತುತಿ ಜೈನ್ ನಿರೂಪಿಸಿ, ಶಿವರಾಜ್ ಜೈನ್ ವಂದಿಸಿದರು

































