ಪೇಟೆ ಧಾರಣೆ – ಇಂದು ಕಾರ್ಕಳ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣಿನ ದರ ಇಂತಿದೆ

ಕಾರ್ಕಳ : ಮಳೆಗಾಲ ಆರಂಭವಾಗುತ್ತಿದ್ದಂತೆ ತರಕಾರಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ದರ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಕಾರ್ಕಳದ ತರಕಾರಿ ವ್ಯಾಪಾರಸ್ಥರು. ಹಣ್ಣಿನ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿಯಲ್ಲಿ ಮುಂದುವರೆಯುತ್ತಿದ್ದು, ಆಗಸ್ಟ್‌ ತಿಂಗಳ ನಂತರ ಹಣ್ಣಿನ ಇಳುವರಿ ಹೆಚ್ಚಾಗುವುದರಿಂದ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಬಂರಿ ಸೊಪ್ಪು: 100 -120 ರೂ., ಮುಳ್ಳುಸೌತೆ : 50 ರೂ., ಶುಂಠಿ : 180 -120 ರೂ., ಟೊಮ್ಯಾಟೋ : 36-40 ರೂ. , ನೀರುಳ್ಳಿ : 25 ರೂ., ಬಟಾಟೆ : 25 -30ರೂ., ಬೆಳ್ಳುಳ್ಳಿ : 140 -160 ರೂ., ಸೌತೆ : 20 ರೂ., ಬೀನ್ಸ್‌ : 120 ರೂ., ಬಿಳಿ ಬೀನ್ಸ್‌ – 100 ರೂ., ಕಾಯಿಮೆಣಸು : 80ರೂ., ಕ್ಯಾರೆಟ್‌ : 70 – 80 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 50 ರೂ., ಬೆಂಡೆ : 50 ರೂ., ಕುಂಬಳಕಾಯಿ : 25 -30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 50 ರೂ., ಹಾಗಲಕಾಯಿ : 60 ರೂ., ಗೆಣಸು : 30 ರೂ., ಲಿಂಬೆ : 80 – 100 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 90- 100 ರೂ., ಉದ್ದ ಮೆಣಸು : 70 ರೂ., ಬದಣೆ : 50 ರೂ., ಗುಳ್ಳ : 80 ರೂ., ನುಗ್ಗೆ ಕಾಯಿ – 120-140 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 180 – 200 ರೂ., ದಾಳಿಂಬೆ : 160- 180 ರೂ., ಮಾವು : 60 -120 ರೂ., (ಮಲ್ಲಿಕಾ : 80 -120 ರೂ. ), (ನೀಲಂ : 80), ದ್ರಾಕ್ಷಿ : 120 ರೂ., ಕಲ್ಲಂಗಡಿ : 20 – 35ರೂ., ಬಾಳೆ : 60 -80ರೂ., ಕಿತ್ತಳೆ : 120 ರೂ., ಮೂಸಂಬಿ : 60-80 ರೂ.









error: Content is protected !!
Scroll to Top