ಶ್ರೀಮಾ ರೈ ಗೆ ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್

ಪುತ್ತೂರು : ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರ ಸ್ಮರಣಾರ್ಥವಾಗಿ ಕೊಡಲ್ಪಡುವ ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ 2023 ಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಶ್ರೀಮಾ ರೈ ಭಾಜನರಾಗಿದ್ದಾರೆ. ಇವರು ಪುತ್ತೂರಿನ ಬೆಳ್ಳಿಪ್ಪಾಡಿ ಕುಟುಂಬ ಟ್ರಸ್ಟ್‌ನ ಅಧ್ಯಕ್ಷ ನೇಮಿರಾಜ್ ರೈ ಮತ್ತು ನಿಟ್ಟೆ ಗುತ್ತು ವಿಶಾಲಿ ಎನ್. ರೈ ದಂಪತಿ ಪುತ್ರಿ. ಮಿಸೆಸ್ ಇಂಡಿಯಾ ಗ್ಲೋಬ್- 2009 ಕಿರೀಟವನ್ನು ಮುಡಿಗೇರಿಸಿರುವ ಶ್ರೀಮಾ ರವರು ಸದ್ಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂಬೈನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಮೆರೈನ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಕಂಪನಿಯನ್ನು ಮುನ್ನಡೆಸುತ್ತಿರುವ ಆದಿತ್ಯ ರೈ ರವರೊಂದಿಗೆ ವಿವಾಹವಾಗಿರುವ ಶ್ರೀಮಾ ರವರು ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಪೂರ್ಣ ಸಮಯದೊಂದಿಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಕಾರ್ಯ ವೈಖರಿ ಮೂಲಕ ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ 2023 ಅನ್ನು ತಮ್ಮದಾಗಿಸಿಕೊಂಡಿದ್ದಾರೆ.







































































error: Content is protected !!
Scroll to Top