ಹೆಬ್ರಿ : ಜೀವನದಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿಯೊಂದಿಗೆ ಬದುಕಿಗೆ ಭದ್ರತೆ ಒದಗುತ್ತದೆ. ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಚಟುವಟಿಕೆಗಳೊಂದಿಗೆ ಸಹಕಾರ, ಸೌಹಾರ್ದತೆಯ ವಾತಾವರಣ ನಿರ್ಮಾಣ ಹಾಗೂ ಆತ್ಮವಿಶ್ವಾಸವನ್ನು ಮೂಡಿಸುವ ಮೂಲಕ ಕಾರ್ಯನಿರ್ವಹಿಸುವ ಜ್ಞಾನವಿಕಾಸ ಯೋಜನೆ ಸಮಾಜದಲ್ಲಿ ಮಾದರಿಯಾಗಿದೆ ಎಂದು ವಾಗ್ಮಿ ದೀಪಿಕಾ ಶೆಟ್ಟಿ ಚಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮೇ 21 ರಂದು ಎಳ್ಳಾರೆ ಶಿಶು ಮಂದಿರದಲ್ಲಿ ಅಭಿವೃದ್ಧಿ ಜ್ಞಾನವಿಕಾಸ ಕೇಂದ್ರದ ಸದಸ್ಯೆಯರಿಗೆ ನಡೆದ ಸಂಸ್ಕೃತಿ – ಸಂಸ್ಕಾರ ಕುರಿತು ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಖಾ ವಹಿಸಿದ್ದರು. ಈ ಸಂದರ್ಭ ಕೇಂದ್ರದ ಸಂಯೋಜಕಿ ಸುನಂದಾ, ಮುದ್ರಾಡಿ ವಲಯದ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಹೇಮ ಉಪಸ್ಥಿತರಿದ್ದರು. ಸುಜಾತ ಸ್ವಾಗತಿಸಿ, ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕುಶಾಲ ವಂದಿಸಿದರು.



























