ಮೇ 23 – 24 : ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಕಾಲಾವಧಿ ಮಾರಿಪೂಜೆ

ಕಾರ್ಕಳ : ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಕಾಲಾವಧಿ ರಾಶಿ ಮಾರಿಪೂಜೆಯು ಮೇ 23 ಮತ್ತು 24 ರಂದು ಜರುಗಲಿದೆ.

ಮೇ 23 ರಂದು ಬೆಳಿಗ್ಗೆ 8 ಗಂಟೆಗೆ ಮಾರ್ಕೆಟ್‌ ರಸ್ತೆಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ರಾತ್ರಿ 7:30 ಗಂಟೆಗೆ ಶ್ರೀ ದೇವಿಗೆ ಮಹಾಪೂಜೆಯಾಗಿ ನಂತರ ದರ್ಶನ ಸೇವೆಯ ಮುಖಾಂತರ ಮೆರವಣಿಗೆಯೊಂದಿಗೆ ದೇವಸ್ಥಾನ ಪ್ರವೇಶ ಹಾಗೂ ರಾತ್ರಿ 12:30 ಗಂಟೆಗೆ ಬಲಿಪೂಜೆ ನೆರವೇರಲಿದೆ. ಅಂದು ರಾತ್ರಿ 10 ಗಂಟೆಗೆ ದೇವಸ್ಥಾನದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಮೇ 24 ರಂದು ಮಧ್ಯಾಹ್ನ 12 ಗಂಟೆಗೆ ಅರಮನೆ ಪೂಜೆ ನಡೆಯಲಿದ್ದು, ಸಂಜೆ 4 ಗಂಟೆಗೆ ಮಹಾಪೂಜೆಯಾಗಿ ಶ್ರೀ ದೇವಿಯ ದರ್ಶನ ಸಹಿತ ಭೂತಗಳ ಭೇಟಿ ಜರುಗಲಿರುವುದು.

error: Content is protected !!
Scroll to Top