ಕಾರ್ಕಳ : ಬೈಕಿಗೆ ಕಾರು ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಮೇ 11 ರಂದು ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಮಾವಿನಕಟ್ಟೆಯ ಸಮೀಪ ಸಂಭವಿಸಿದೆ. ಗುರುಪಾದಯ್ಯ ಎಂಬುವವರು ಬೈಕ್( KA-19-HJ-1495 )ನಲ್ಲಿ ದೂಪದಕಟ್ಟೆ ಕಡೆಯಿಂದ ಪಡುಬಿದ್ರೆ ಕಡೆಗೆ ಹೋಗುತ್ತಿರುವಾಗ ರಾಮಕೃಷ್ಣ ಶೆಟ್ಟಿ ಎಂಬುವವರು (KA-20-MC-3343) ಕಾರನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು ಬೈಕ್‌ನ್ನು ಹಿಂದಿಕ್ಕಿ ಹೋಗುವ ಸಂದರ್ಭ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಗುರುಪಾದಯ್ಯ ಬೈಕ್ ಸಮೇತ ರಸ್ತೆ ಬಿದ್ದಿದ್ದು ಪರಿಣಾಮವಾಗಿ ಕೈ ಮತ್ತು ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬೈಕಿಗೆ ಕಾರು ಡಿಕ್ಕಿ – ಸವಾರನಿಗೆ ಗಾಯ


































