ಬಜರಂಗದಳ ನಿಷೇಧ ಸಿದ್ದರಾಮಯ್ಯ ಸಮರ್ಥನೆ : ಕಾರ್ಕಳ ಬಿಜೆಪಿ ಖಂಡನೆ

ಕಾರ್ಕಳ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾವನೆಯನ್ನು ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮರ್ಥಿಸಿರುವುದನ್ನು ಕಾರ್ಕಳ ಬಿಜೆಪಿ ಬಲವಾಗಿ ಖಂಡಿಸುತ್ತದೆ.

ಹಿಂದೂ ವಿರೋಧಿ ನೀತಿಗೆ ಕೈಗನ್ನಡಿ
ದೇಶಪ್ರೇಮಿ ಯುವಜನರ ರಾಷ್ಟ್ರ ವ್ಯಾಪಿಸಂಘಟನೆ ಬಜರಂಗ ದಳ ನಿಷೇಧದ ಮುನ್ಸೂಚನೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟವಾಗಿರುವುದು, ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಗೆ ಕೈಗನ್ನಡಿಯಾಗಿದೆ. ಗೋ ಹತ್ಯೆಯ ಸಮರ್ಥನೆ, ಕೇಸರಿ ಪೇಟಾವನ್ನು ಕಿತ್ತೆಸೆದು ತೋರಿಸಿರುವ ದುರ್ವರ್ತನೆ, ಹನುಮ ಜಯಂತಿಯ ಆಚರಣೆಗೆ ವ್ಯಂಗ್ಯದ ಮಾತು, ಹಿಂದೂ ಸಂಘಟನೆಗಳ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎನ್ನುವ ಸಿದ್ದರಾಮಯ್ಯನವರ ಉದ್ದಟನದ ಮಾತನ್ನು ಜನತೆ ಎಂದಿಗೂ ಮರೆಯುವುದಿಲ್ಲ.

ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ ವಿರೋಧಿ ಆಡಳಿತವನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದರು. ಆನಂತರವು ನಿರಂತರವಾಗಿ ತಮ್ಮ ಮಾತು ಹಾಗೂ ನಡವಳಿಕೆಗಳಲ್ಲಿ ಹಿಂದೂ ದ್ವೇಷವನ್ನು ಕಾರುತ್ತಾ, ಉದ್ದಟತನವನ್ನು ತೋರುತ್ತಿರುವುದನ್ನು ಬಹುಸಂಖ್ಯಾತ ಹಿಂದೂ ಸಮಾಜವು ಗಮನಿಸುತ್ತಿದ್ದು, ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ಸಾಣೂರು ನರಸಿಂಹ ಕಾಮತ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.







































































error: Content is protected !!
Scroll to Top