ಚನ್ನಪಟ್ಟಣದಲ್ಲಿ ಕಾಂಗ್ರೆಸ್​, ಜೆಡಿಎಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ರಾಮನಗರ : ರಾಜ್ಯ ಬಹಳ ಕಾಲದಿಂದ ಅಸ್ತಿರ ಸರ್ಕಾರಗಳನ್ನು ನೋಡಿದೆ. ಇದರಿಂದ ಲೂಟಿಯಾಗುತ್ತದೆ ಹೊರತು ಅಭಿವೃದ್ಧಿಯಾಗುವುದಿಲ್ಲ. ಕಾಂಗ್ರೆಸ್​ ಮತ್ತು ಜೆಡಿಎಸ್​ ಹೊರಗಿಂದ ನೋಡಲು ಮಾತ್ರ ಬೇರೆ ಬೇರೆ ಆದರೆ ಆಂತರಿಕವಾಗಿ ಒಂದೇ. ಜೆಡಿಎಸ್​ ಹೇಳುತ್ತೆ 15 ಸೀಟ್​ ಬಂದರೇ ನಾವೇ ಕಿಂಗ್​ ಮೇಕರ್ ಅಂತ. ಈ ಸ್ವಾರ್ಥದಿಂದ ಒಂದು ಕುಟುಂಬಕ್ಕಷ್ಟೇ ಲಾಭವಾಗುತ್ತದೆ. ಆದರೆ ರಾಜ್ಯದ ಅನೇಕ ಕುಟುಂಬಕ್ಕೆ ನಷ್ಟವಾಗುತ್ತದೆ. ಜೆಡಿಎಸ್​ಗೆ ಹಾಕುವ ಪ್ರತಿಯೊಂದು ಮತವು ಕಾಂಗ್ರೆಸ್​ಗೆ ಹೋಗುತ್ತದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವಾಗಲಿ ಎಂದು ಎಂದು ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್​ನ ಬಿ ಟೀಮ್​ ಜೆಡಿಎಸ್​
ಕಾಂಗ್ರೆಸ್​ನ ವಾರಂಟಿ ಮುಗಿದಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ತನ್ನ ಗ್ಯಾರೆಂಟಿ ಆಶ್ವಾಸನೆಯನ್ನು ಮರೆತಿದೆ. ಅಧಿಕಾರಕ್ಕೆ ಬಂದಮೇಲೆ ಗ್ಯಾಂರೆಂಟಿಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಅಲ್ಲದೇ ಬಿಜೆಪಿ ಜಾರಿಗೆ ತಂದ ಯೋಜನೆಗಳನ್ನು ನಿಲ್ಲಿಸಿದೆ. ಕಾಂಗ್ರೆಸ್​ನ ನೀತಿಗಳೇ ರಿವರ್ಸ್​ ಗೇರ್​ ಆಗಿವೆ. ಕಾಂಗ್ರೆಸ್​ನ ಮಾತುಗಳನ್ನು ಜೆಡಿಎಸ್​ ಒಪ್ಪುತ್ತದೆ. ಕಾಂಗ್ರೆಸ್​ನ ಬಿ ಟೀಮ್​ ಜೆಡಿಎಸ್​. ಹೀಗಾಗಿ ರಾಜ್ಯದಲ್ಲಿ ಡಬಲ್​ ಇಂಜಿನ್​ ಸರ್ಕಾರ ಅಧಿಕಾರಕ್ಕೆ ಬರಬೇಕು

ಕಾಂಗ್ರೆಸ್​ ಪರಂಪರಾಗತ ಗೊಂಬೆಗಳ ಉದ್ಯಮಗಳನ್ನು ನಾಶ ಮಾಡಿತ್ತು
ಕಾಂಗ್ರೆಸ್​ ಪರಂಪರಾಗತ ಗೊಂಬೆಗಳ ಉದ್ಯಮಗಳನ್ನು ನಾಶ ಮಾಡಿತ್ತು. ಬೇರೆ ದೇಶದ ಗೊಂಬೆಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡಿತ್ತು. ಚನ್ನಪಟ್ಟಣದ ಗೊಂಬೆಗಳ ಬಗ್ಗೆ ನಾನು ಮನ್​ ಕೀ ಬಾತ್​ನಲ್ಲಿ ಮಾತನಾಡಿದ್ದೆ. ಅಲ್ಲದೇ ದೇಶವಾಸಿಗಳಿಗೆ ಕರೆ ಕೊಟ್ಟದ್ದೆ ಚನ್ನಪಟ್ಟಣದ ಗೊಂಬೆಗಳನ್ನು ಖರೀದಿಸಿ ಎಂದು. ಶೇ 75ರಷ್ಟು ಗೊಂಬೆಗಳ ರಪ್ತು ಆಗುತ್ತಿದೆ. ಇದರಿಂದ ಸಾವಿರಾರು ಕೋಟಿ ಆದಾಯವಾಗುತ್ತಿದೆ ಎಂದರು.

ನಮ್ಮ ಸರ್ಕಾರ ರೇಷ್ಮೆ ರೈತರಿಗೆ ಅನೇಕ ಅನುಕೂಲ ಮಾಡಿದೆ
ರೇಷ್ಮೆ ನಾಡಿನ ರೈತರಿಗೂ ಕೂಡ ಅನೇಕ ಅನುಕೂಲಗಳನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ರೇಷ್ಮ ರೈತರಿಗೆ ಪ್ರತಿ ಟನ್​ಗೆ 10 ಸಾವಿರ ನೀಡುತ್ತೆ. ರೇಷ್ಮ ರಪ್ತು ಹೆಚ್ಚಾಗಿದೆ. ನಮ್ಮ ಸರ್ಕಾರ ರೇಷ್ಮೆ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.

ವಿಶ್ವಾಸ ಘಾತಕ ಸರ್ಕಾರವೆಂದರೇ ಅದು ಕಾಂಗ್ರೆಸ್​ ಸರ್ಕಾರ
ವಿಶ್ವಾಸ ಘಾತಕ ಸರ್ಕಾರವೆಂದರೇ ಅದು ಕಾಂಗ್ರೆಸ್​ ಸರ್ಕಾರ. ದೇಶದ ರೈತರಿಗೆ ವಿಶ್ವಾಸ್​ ಘಾತಕ ಮಾಡಿದೆ. ರೈತರನ್ನು ಸಾಲದ ಹೊರೆಯಲ್ಲಿ ಮುಳಗಿಸಿದೆ. ಕಾಂಗ್ರೆಸ್​ 2008ರಲ್ಲಿ ಸಾಲಮನ್ನಾದ ಸುಳ್ಳು ಘೋಷಣೆ ಮಾಡಿತು. ಕಾಂಗ್ರೆಸ್​ನ ಸಾಲಮನ್ನಾದ ಹಣ ರೈತರಿಗೆ ತಲುಪುವುದಿಲ್ಲ. ಶೇ 100ರಲ್ಲಿ 10 ರೈತರಿಗೂ ಹಣ ತಲುಪುವುದಿಲ್ಲ. ಕಾಂಗ್ರೆಸ್​ನ ಪ್ರತಿಯೊಂದು ಯೋಜನೆ ಸುಳ್ಳಿನ ಗ್ಯಾರೆಂಟಿ.

ಮಲ್ಲಿಕಾರ್ಜುನ್​ ಖರ್ಗೆ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ
ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇದರಿಂದ ಹೆಚ್ಚು ತೊಂದರೆಗೆ ಒಳಗಾದವರು, ನೊಂದಿರುವವರು ಕಾಂಗ್ರೆಸ್​ನವರು. ಇದನ್ನು ಅವರಿಗೆ ಸಹಿಸೋಕೆ ಆಗುತಿಲ್ಲ. ಹೀಗಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಇವರು ಅಭಿವೃದ್ದಿ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಹಾವಿನ ಬಗ್ಗೆ, ಹಾವಿನ ವಿಷದ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ನನಗೆ ಬೇಸರವಿಲ್ಲ. ಶಿವನ ಕೊರಳಿಗೆ ಶೋಭಾಯ ಮಾನವಾಗಿರುವುದು ಹಾವು. ನನಗೆ ಈ ದೇಶದ ಜನತೆ ಶಿವ ಸ್ವರೂಪಿ. ಶಿವ ಸ್ವರೂಪಿಯಾದ ನಿಮ್ಮ ಕೊರಳಲ್ಲಿ ಹಾವಾಗಿ ಇರಲು ನನಗೆ ಖುಷಿ ಇದೆ. ಆದರೆ ಇವರ ಮತ್ತು ಇಂತಹ ಮಾತುಗಳಿಂದ ದೂರವಿಡಲು ಮೇ 10 ರಂದು ನಮಗೆ ಮತ ಹಾಕಿ ಆಶಿರ್ವಾದ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.







































































error: Content is protected !!
Scroll to Top