ಕಲ್ಯಾ : ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಕಾರ್ಕಳ: ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ೭ ಮಂದಿ ಕಾಂಗ್ರೆಸ್ ಕಾರ್ಯಕರ್ತರು ವಿ.ಸುನಿಲ್ ಕುಮಾರ್ ಅವರ ಅಭಿವೃದ್ದಿ ಚಟುವಟಿಕೆಗಳು ಮತ್ತು ಕ್ಷೇತ್ರದ ಬಗೆಗಿನ ಅವರ ವಿಶೇಷ ಕಾಳಜಿಯನ್ನು ಮೆಚ್ಚಿ ಏ. 24 ರಂದು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಬಾಲೇಶ್ ಕುಮೆರೊಟ್ಟು, ಜಯ ನಾಯಕ್ ಕೈರಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರು ರಾಧ ಕೈರಬೆಟ್ಟು, ಸುಪ್ರೀತ ಕೈರಬೆಟ್ಟು, ಮೂರ್ತಿ ನೆಲ್ಲಿಗುಡ್ಡೆ, ನಾಗರಾಜ್ ಕೈರಬೆಟ್ಟು ಅವರು ಸಚಿವ ಸುನಿಲ್‌ ಕುಮಾರ್‌ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಈ ಸಂದರ್ಭ ಮಹಾಶಕ್ತಿಕೇಂದ್ರ ಅಧ್ಯಕ್ಷ ಸುಮಿತ್ ಶೆಟ್ಟಿ, ಕಲ್ಯಾ ಗ್ರಾ.ಪಂ. ಅಧ್ಯಕ್ಷ ಸಂಜೀವ ಶೆಟ್ಟಿ, ಉಪಾಧ್ಯಕ್ಷೆ ಸುಪ್ರೀಯಾ ಕೋಟ್ಯಾನ್, ಪಕ್ಷದ ಪ್ರಮುಖರಾದ ಕೃಷ್ಣರಾಜ ರೈ ಕುಂಟಾಡಿ, ರವಿರಾಜ ಉಪಾದ್ಯಾಯ, ನಾಗಭೂಷಣ್, ಸುನೀಲ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

















































error: Content is protected !!
Scroll to Top