ಟ್ರಕ್‌-ಬಸ್‌ ಡಿಕ್ಕಿ : 4 ಸಾವು, 22 ಮಂದಿಗೆ ಗಾಯ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ

ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಪುಣೆ ಸಮೀಪ ಭೀಕರ ಅಪಘಾತ ಸಂಭವಿಸಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಟ್ರಕ್-ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿದೆ. .
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಅಂಬೇಗಾಂವ್‌ನ ಸ್ವಾಮಿ ನಾರಾಯಣ ದೇಗುಲದ ಬಳಿ ನವಲೆ ಸೇತುವೆ ಬಳಿ ಅಪಘಾತ ಸಂಭವಿಸಿದೆ.ಸಕ್ಕರೆ ಮೂಟೆ ಸಾಗಿಸುತ್ತಿದ್ದ ಟ್ರಕ್‌ ಟೂರಿಸ್ಟ್‌ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್‌ ಉರುಳಿ ಬಿದ್ದಿದ್ದು, ಬಸ್ಸಿನ ಮುಂಭಾಗ ಪೈರ್ತಿ ನುಜ್ಜುಗುಜ್ಜಾಗಿದೆ. ಬಸ್‌ ನೀತಾ ಕಂಪನಿಗೆ ಸೇರಿದ್ದು.
ದುರ್ಘಟನೆಗೆ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಹಾಗೂ ಅಗ್ನಶಾಮಕ ಪಡೆಯವರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.































































error: Content is protected !!
Scroll to Top