ಕೆಲ ಸಮಯದಿಂದ ಅವಕಾಶಗಳಿಲ್ಲದೆ ಚಿಂತೆಯಲ್ಲಿದ್ದ ನಟ
ಬೆಂಗಳೂರು: ಕಿರುತೆರೆ ನಟ ಸಂಪತ್ ಜಯರಾಮ್ (35) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವು ಕನ್ನಡ ಸಿನೆಮಾ ಹಾಗೂ ಧಾರಾವಾಹಿಗಳಲ್ಲಿ ಸಂಪತ್ ಜಯರಾಮ್ ನಟಿಸಿದ್ದರು. ಆದರೆ ಇತ್ತೀಚೆಗೆ ಕೆಲ ಸಮಯದಿಂದ ಸೂಕ್ತ ಅವಕಾಶ ಸಿಗದೆ ಚಿಂತೆಯಲ್ಲಿದ್ದರು.
ಸಂಪತ್ ಅವರು ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಆತ್ಮಹತ್ಯೆಗೆ ಖಚಿತ ಮಾಹಿತಿಗಳು ತಿಳಿದುಬಂದಿಲ್ಲ.
ಸಂಪತ್ ರಾಜ್ ಅವರು ಅಗ್ನಿ ಸಾಕ್ಷಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಕೇವಲ ಒಂದು ವರ್ಷವಾಗಿತ್ತು.


































