ಸುದೀಪ್‌ ಸಿನೆಮಾ, ಜಾಹೀರಾತು ನಿಷೇಧಿಸಲು ಆಗ್ರಹ

ಸಿನೆಮಾ ಪೋಸ್ಟರ್‌ ಕೂಡ ತೆರವು ಮಾಡಬೇಕೆಂದು ಒತ್ತಾಯ

ಬೆಂಗಳೂರು: ಬಿಜೆಪಿ ಪರ ಪ್ರಚಾರ ಮಾಡುವುದಾಗಿ ನಟ ಕಿಚ್ಚ ಸುದೀಪ್ ಘೋಷಿಸಿದ ಬೆನ್ನಲ್ಲೆ ನಟ ಅವರು ನಟಿಸಿರುವ ಚಲನಚಿತ್ರ, ಜಾಹೀರಾತು ಮತ್ತು ಇತರ ಕಾರ್ಯಕ್ರಮಗಳ ಪ್ರಸಾರವನ್ನು ನಿಷೇಧಿಸುವಂತೆ ಜೆಡಿಎಸ್‌ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸುದೀಪ್ ಅವರ ಸಿನೆಮಾ, ಜಾಹೀರಾತು, ಟಿವಿ ಕಾರ್ಯಕ್ರಮಗಳ ಪ್ರಸಾರವನ್ನು ನಿಷೇಧಿಸಬೇಕು ಎಂದು ಜೆಡಿಎಸ್ ರಾಜ್ಯ ಕಾನೂನು ಘಟಕದ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಗುರುವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಸುದೀಪ್‌ ನಟಿಸಿರುವ ಚಲನಚಿತ್ರಗಳು ಅಥವಾ ಕಾರ್ಯಕ್ರಮಗಳ ಪ್ರಸಾರ ಮತದಾರರ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಅವುಗಳನ್ನು ನಿಷೇಧಿಸಲು ಆದೇಶವನ್ನು ಹೊರಡಿಸಬೇಕು. ಸಾರ್ವಜನಿಕ ಸ್ಥಳಗಳಿಂದ ನಟನ ಫೋಟೊ ಇರುವ ಪೋಸ್ಟರ್‌ಗಳನ್ನು ತೆಗೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಿಇಸಿಗೆ ಮನವಿ ಮಾಡಿದರು.



























































































































error: Content is protected !!
Scroll to Top