ಕಬ್ಬಿನಾಲೆಯಲ್ಲಿ ಬಿಜೆಪಿ ಬೂತ್‌ ಸಮಾವೇಶ

ಕಾರ್ಯಕರ್ತರೇ ಪಕ್ಷದ ಬಹುದೊಡ್ಡ ಶಕ್ತಿ – ಸುನೀಲ್‌ ಕುಮಾರ್

ಹೆಬ್ರಿ : ಸ್ವರ್ಣ ಕಾರ್ಕಳ ಸ್ವಚ್ಚ ಕಾರ್ಕಳ ಎಂಬ ಪರಿಕಲ್ಪನೆಯಡಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ. ಈಗಾಗಲೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಕಳವು ದಕ್ಷಿಣ ಭಾರತದಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದ್ದು, ನಿಟ್ಟೆಯಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಹಾಗೂ ವಿವಿಧ ಯೋಜನೆಗಳ ಮೂಲಕ ಜನತೆಗೆ ಉದ್ಯೋಗ ಕಲ್ಪಿಸುವುದರೊಂದಿಗೆ ಔದ್ಯೋಗಿಕವಾಗಿ ಉಭಯ ತಾಲೂಕುಗಳ ಅಭಿವೃದ್ಧಿಯನ್ನು ಮಾಡಲಿದ್ದೇವೆ. ಈ ಎಲ್ಲಾ ಯಶಸ್ವಿ ಯೋಜನೆಗಳ ಹಿಂದಿನ ಬಹುದೊಡ್ಡ ಶಕ್ತಿ ಪಕ್ಷದ ಕಾರ್ಯಕರ್ತರು ಎಂದು ಸಚಿವ ವಿ. ಸುನೀಲ್‌ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಾ. 3 ರಂದು ಮುದ್ರಾಡಿ ಗ್ರಾ. ಪಂ. ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ನಡೆದ ಬೂತ್ ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿ ಸರಕಾರದ ಕಾರ್ಯವೈಖರಿಯನ್ನು ಮೆಚ್ಚಿ ಕಬ್ಬಿನಾಲೆ ಗ್ರಾಮದ ಚಂದ್ರಹಾಸ ಗೌಡ ಹಾಗೂ ಅವರ ಬೆಂಬಲಿಗರು ಈ ಸಂದರ್ಭ ಕಾಂಗ್ರೇಸ್‌ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಗಣಪತಿ ಮುದ್ರಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ರಾಮಕೃಷ್ಣ ಆಚಾರ್ಯ, ಶಕ್ತಿಕೇಂದ್ರ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಜಿ. ಪಂ. ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್, ಗ್ರಾಮ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ಜಗದೀಶ್ ಪೂಜಾರಿ, ಸತೀಶ್ ಗೌಡ, ಶಾಂತ, ದಿನೇಶ್, ಪಲ್ಲವಿ, ಸಾತ್ವಿಕ್ ಹೆಬ್ಬಾರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು





























































































error: Content is protected !!
Scroll to Top