ಇದಕ್ಕೂ ಸಿಕ್ಕಿತು ಭರ್ಜರಿ ಪ್ರಚಾರ
ಮಂಗಳೂರು : ಅದ್ಭುತ ಯಶಸ್ಸು ಕಂಡಿರುವ ಕಾಂತಾರ ಚಿತ್ರ ತಂಡ ದೈವರ ಕೋಲದಲ್ಲಿ ಹರಕೆ ತೀರಿಸಿ ಧನ್ಯತಾ ಭಾವ ಹೊಂದಿದೆ. ರಿಷಬ್ ಶೆಟ್ಟಿ ಮತ್ತು ಇಡೀ ಚಿತ್ರತಂಡ ದೈವಕ್ಕೆ ಮಂಗಳೂರಿನಲ್ಲಿ ಹರಕೆ ತೀರಿಸಿದೆ. ಈ ತೀರಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂತಾರ ದೈವ, ಭೂತ ಕೋಲ, ಕರಾವಳಿ ಭಾಗದ ಆಚಾರ-ವಿಚಾರಗಳ ಬಗ್ಗೆ ಜಗತ್ತಿಗೆ ಸಾರಿದ ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಈ ಸಕ್ಸಸ್‌ಗೆ ಕಾರಣ ದೈವಗಳು ಎನ್ನುವುದು ಸಿನಿಮಾ ತಂಡದ ನಂಬಿಕೆ.
ಕಾಂತಾರ ಸೂಪರ್ ಸಕ್ಸಸ್ ಬಳಿಕ ಚಿತ್ರತಂಡ ಹರಕೆ ತೀರಿಸಿದೆ. ಹರಕೆ ವೇಳೆ ಇಡೀ ಕಾಂತಾರ ತಂಡ ಭಾಗಿಯಾಗಿತ್ತು. ಮಂಗಳೂರಿನಲ್ಲಿ ನಡೆದ ಭೂತಕೋಲದಲ್ಲಿ ಚಿತ್ರತಂಡ ಭಾಗಿಯಾಗಿ ವಿಶೇಷ ಹರಕೆ ತೀರಿಸಿದೆ.
ನಿರ್ಮಾಪಕ ವಿಜಯ್ ಕಿರಂಗದೂರು, ಕಾರ್ತಿಕ್ ಗೌಡ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ದೈವ ನರ್ತಕ ಇಡೀ ತಂಡವನ್ನು ಅಪ್ಪಿಕೊಂಡು ಆಶೀರ್ವಾದ ಮಾಡಿದೆ. ದೃಶ್ಯ ರೋಮಾಂಚನಕಾರಿಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ದೈವ ನರ್ತಕನಾಗಿ ರಿಷಬ್ ಶೆಟ್ಟಿ ಪೊಲೀಸ್ ಅಧಿಕಾರಿ ಹಾಗೂ ಊರಿನವರನ್ನು ಅಪ್ಪಿಕೊಂಡ ಹಾಗೆ ಹರಕೆ ತೀರಿಸುವ ವೇಳೆಯೂ ದೈವ ನರ್ತಕ ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದೆ. ಬಳಿಕ ಇಡೀ ತಂಡದವರನ್ನು ಅಪ್ಪಿಕೊಂಡಿರುವ ದೃಶ್ಯ ಗಮನ ಸೆಳೆಯುತ್ತಿದೆ.
























