ಕಾರ್ಕಳ : ಜ. 11ರಂದು ನಾಪತ್ತೆಯಾಗಿದ್ದ ನಿಟ್ಟೆ ಗ್ರಾಮದ ಅತ್ತೂರು ದೂಪದಕಟ್ಟೆಯ ಆಲ್ವಿನ್ ನೋರೋನ್ಹಾ (44) ಮೃತದೇಹ ಜ. 15ರಂದು ದೂಪದ ಕಟ್ಟೆ ದ್ವಾರದ ಬಳಿ ಪತ್ತೆಯಾಗಿದೆ. ವಿಪರೀತ ಶರಾಬು ಕುಡಿಯುತ್ತಿದ್ದ ಈತ ಜ. 11ರಂದು ಕೆಲಸಕ್ಕೆಂದು ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಈ ಕುರಿತು ಅವರ ತಾಯಿ ಸಿಸಿಲಿಯಾ ನೋರೋನ್ಹಾ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
























