ನಾಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪ್ರಿಯಕರನೊಂದಿಗೆ ಪತ್ತೆ

ಪೊಲೀಸ್‌ ಠಾಣೆಗೆ ಬಂದು ಪ್ರಿಯಕರನ ಜತೆ ಬದುಕುವುದಾಗಿ ಹೇಳಿಕೆ

ಸುಬ್ರಹ್ಮಣ್ಯ : ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಸದಸ್ಯೆ ವಿವಾಹಿತೆ ಭಾರತಿ ಮೂಕಮೂಲೆ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಜ.5ರಂದು ಪ್ರಿಯಕರನೊಂದಿಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಬಂದಿರುವ ಭಾರತಿ ತಾನು ಆತನೊಂದಿಗೆ ಬದುಕಲು ಇಚ್ಚಿಸಿರುವುದಾಗಿ ಹೇಳಿ ತೆರಳಿದ್ದಾರೆ.
ಭಾರತಿ ಮೂಕಮೂಲೆ ಮತ್ತು ಪ್ರಿಯಕರ ನಂದನ್‌ ನ್ಯಾಯವಾದಿಯೊಂದಿಗೆ ಠಾಣೆಗೆ ಬಂದಿದ್ದರು. ಪ್ರಿಯಕರ ನಂದನ್‌ ಜತೆ ಮುಂದಿನ ಜೀವನ ಕಳೆಯುವುದಾಗಿ ಆಕೆ ಲಿಖಿತವಾಗಿ ಹೇಳಿಕೆ ಕೊಟ್ಟು ತೆರಳಿದ್ದಾರೆ.
ಭಾರತಿ ಎರಡು ತಿಂಗಳ ಹಿಂದೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಮತ್ತು ಪತಿಯನ್ನು ಬಿಟ್ಟು ನಿಗೂಢವಾಗಿ ನಾಪತ್ತೆಯಾದ ಪ್ರಕರಣ ಕುತೂಹಲ ಕೆರಳಿಸಿತ್ತು. ಪತಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಿದರೂ ಪತ್ತೆಯಾಗಿರಲಿಲ್ಲ. ಒಂದು ತಿಂಗಳ ಹಿಂದೆ ವೀಡಿಯೊ ಮಾಡಿ ಹರಿಬಿಟ್ಟಿದ್ದ ಭಾರತಿ ತಾನು ನಂದನ್‌ ಜತೆ ಇರುವುದಾಗಿ ಹೇಳಿಕೊಂಡಿದ್ದರು.









































error: Content is protected !!
Scroll to Top