ಕಿರುತೆರೆ ನಟಿ ಸೆಟ್‌ನಲ್ಲೇ ಆತ್ಮಹತ್ಯೆ

ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದ ನಟಿ

ಹೊಸದಿಲ್ಲಿ : ಕಿರುತೆರೆ ನಟಿ ತನಿಶಾ ಶರ್ಮಾ ಟಿವಿ ಧಾರಾವಾಹಿಯೊಂದರ ಸೆಟ್‌ನಲ್ಲೇ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿಗೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದರು.
ಅಲಿ ಬಾಬಾ: ದಾಸ್ತಾನ್-ಎ-ಕಾಬೂಲ್ ಸೇರಿ ತನಿಶಾ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ‘ಫಿತೂರ್’ ಮತ್ತು ‘ಬಾರ್ ಬಾರ್ ದೇಖೊ’ ಅವರು ನಟಿಸಿರುವ ಇನ್ನೆರಡು ಹಿಂದಿ ಚಿತ್ರಗಳು. ಈ ಚಿತ್ರಗಳಲ್ಲಿ ಕತ್ರಿನಾ ಕೈಫ್‌ ನಾಯಕಿಯಾಗಿದ್ದರು.
ಜನಪ್ರಿಯ ಟಿವಿ ಧಾರಾವಾಹಿಗಳಾದ ‘ಚಕ್ರವರ್ತಿನ್ ಅಶೋಕ ಸಾಮ್ರಾಟ್’, ‘ಭಾರತ್ ಕಾ ವೀರ್ ಪುತ್ರ-ಮಹಾರಾಣಾ ಪ್ರತಾಪ್’ ಮತ್ತು ‘ಅಲಿ ಬಾಬಾ ದಸ್ತಾನ್-ಇ-ಕಾಬೂಲ್’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ತತನಿಶಾ ತನ್ನ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಸೆಟ್‌ಗಳಿಂದ ಹಂಚಿಕೊಂಡು ಉತ್ಸಾಹದಿಂದ ಈರುವವರೆಲ್ಲ ಉಳಿಯುವುದಿಲ್ಲ ಎಂದು ಬರೆದಿದ್ದಾರೆ.











































error: Content is protected !!
Scroll to Top