*ಕರಾವಳಿಯನ್ನು ಬೆಚ್ಚಿ ಬೀಳಿಸಿದ ಹಿಂದು ಯುವ ಮುಖಂಡನ ಕೊಲೆ
ಸುಳ್ಯ: ಸುಳ್ಯದ ಬೆಳ್ಳಾರೆಯಲ್ಲಿ ಮಂಗಳವಾರ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾಗಿರುವುದನ್ನು ಕಂಡು ಬುಧವಾರ ಪುತ್ತೂರು ಮತ್ತು ಸುಳ್ಯ ಬಂದ್ ಆಚರಿಸಲಾಗಿದೆ. ಅಧಿಕೃತವಾಗಿ ಬಂದ್‌ಗೆ ಯಾರೂ ಕರೆ ಕೊಡದಿದ್ದರೂ ಜನರಲ್ಲಿ ಒಂದು ರೀತಿಯ ಭೀತಿಯ ವಾತಾವರಣ ಇದೆ. ನಿನ್ನೆಯೇ ಕೆಲವೆಡೆ ಯುವ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಬಂದ್ ವಾತಾವರಣ ಇದೆ.
ಹಿಂದೂ ಸಂಘಟನೆಗಳು ಸ್ವಯಂಪ್ರೇರಿತ ಬಂದ್ ಮಾಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ಏರ್ಪಟ್ಟಿದೆ. ಸ್ವಯಂ ಪ್ರೇರಿತ ಬಂದ್ ಮಾಡ್ತಿರೋ ಜನರು,ಪುತ್ತೂರು ನಗರದ ಎಲ್ಲಾ ಅಂಗಡಿಗಳ ಬಾಗಿಲು ಬಂದ್ ಮಾಡಿದ್ದಾರೆ. ಕಳೆದ ರಾತ್ರಿಯೇ ಅಂಗಡಿ ಬಾಗಿಲು ಮುಚ್ಚಿರೋ ವ್ಯಾಪಾರಿಗಳು,ಇವತ್ತು ಸ್ವಯಂ ಪ್ರೇರಿತ ಬಂದ್ ಮಾಡ್ತಿದ್ದಾರೆ.
ಭೀತಿ ಮೂಡಿಸಿದ ಹತ್ಯೆ
ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡ, ಬಿಜೆಪಿ ಜಿಲ್ಲಾ ಯುವಮೋರ್ಚಾದ ಸದಸ್ಯ, ಬೆಳ್ಳಾರೆ ಅಕ್ಷಯ ಕೋಳಿ ಅಂಗಡಿಯ ಮಾಲೀಕ ಪ್ರವೀಣ್ ನೆಟ್ಟಾರು(32) ಹತ್ಯೆಯಾದ ಯುವಕ.
ಮಂಗಳವಾರ ರಾತ್ರಿ 9 ಗಂಟೆಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬೆಳ್ಳಾರೆ ಪೆಟ್ರೋಲ್ ಪಂಪ್ ಬಳಿಯ ಮಾಸ್ತಿಕಟ್ಟೆ ಎಂಬಲ್ಲಿ ದಾಳಿ ನಡೆಸಿದ್ದು, ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹಲ್ಲೆ ನಡೆಸಿ ಪರಾರಿ ಆಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಪ್ರವೀಣ್ ನೆಟ್ಟಾರು ಅವರ ಮೇಲೆ ಯಾರು, ಯಾಕೆ ದಾಳಿ ಮಾಡಿದ್ದಾರೆ ಎಂದು ತನಿಖೆ ನಡೆಯುತ್ತಿದೆ. ಬೆಳ್ಳಾರೆ ಪೇಟೆ ಸಹಿತ ಈ ಪ್ರದೇಶದಲ್ಲಿ ಪೋಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ದುಷ್ಕರ್ಮಿಗಳು, ಕೇರಳ ನೋಂದಣಿ ಸಂಖ್ಯೆಯ ವಾಹನದಲ್ಲಿ ಬಂದು ಕೊಲೆ ಮಾಡಿದ್ದಾರೆ. ವಾರದ ಹಿಂದೆ ನಡೆದಿದ್ದ ಮಸೂದ್ ಎಂಬಾತನ ಕೊಲೆಗೆ ಪ್ರತೀಕಾರವಾಗಿ ಪ್ರವೀಣ್ ಹತ್ಯೆ ಮಾಡಿರುವ ಶಂಕೆ ಇದೆ.
ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಂದ್
Recent Comments
ಕಗ್ಗದ ಸಂದೇಶ
on