1 ಕೆಜಿ ಟೀ ಪೌಡರ್‌ ಬೆಲೆ 1 ಲಕ್ಷ ರೂ.!

ಗುವಾಹಟಿ : ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಒಂದು ಕೆಜಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಜೋರ್ಹತ್‌ನ ಹರಾಜು ಕೇಂದ್ರದಲ್ಲಿ ಸೋಮವಾರ ಪ್ರತಿ ಕಿಲೋಗ್ರಾಂಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದು, ಈ ವರ್ಷ ಮಾರಾಟವಾದ ಅತಿ ಹೆಚ್ಚು ಬೆಲೆಯ ಟೀ ಎಂಬ ಹೆಗ್ಗಳಿಕೆ ಪಡೆದಿದೆ. ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಹೇಳಿದರು.
ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ ಈ ಅಪರೂಪದ ಚಹಾವನ್ನು ಕೇವಲ ಒಂದು ಕೆಜಿ ಮಾತ್ರ ಉತ್ಪಾದಿಸಿದೆ.

a href="#" target="_blank">







































error: Content is protected !!
Scroll to Top