ಮುಂಬಯಿ : ಮಹಾರಾಷ್ಟ್ರ ವಿಧಾನ ಪರಿಷತ್‌ನ ಹತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಐದರಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ಈ ಫಲಿತಾಂಶ ಆಡಳಿರೂಢ ಮಹಾರಾಷ್ಟ್ರ ವಿಕಾಸ ಆಘಾಡಿಗೆ ತೀವ್ರ ಆಘಾತ ನೀಡಿದೆ. ಆಘಾಡಿಯ ಆರು ಆಭ್ಯರ್ಥಿಗಳ ಪೈಕಿ ಐವರು ಮಾತ್ರ ಗೆದ್ದಿದ್ದಾರೆ. ಮತಗಳ ಲೆಕ್ಕದಲ್ಲಿ ಎಲ್ಲರೂ ಗೆಲ್ಲಬೇಕಿತ್ತು. ಅಡ್ಡ ಮತದಾನದ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಆಘಾಡಿ ಹಿನ್ನಡೆ ಅನುಭವಿಸಿದೆ. ಈ ಫಲಿತಾಂಶ ಮಹಾರಾಷ್ಟ್ರದ ತ್ರಿಪಕ್ಷ ಮೈತ್ರಿಕೂಟದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆದ್ದಿದ್ದರು. ಐದನೇ ಅಭ್ಯರ್ಥಿಯ ಗೆಲುವಿಗೆ ಮಾತ್ರ ಹೋರಾಟ ಇತ್ತು.
ಬಿಜೆಪಿಗೆ 5 ಪರಿಷತ್ ಸ್ಥಾನ: ಆಘಾಡಿಗೆ ಆಘಾತ




















