ಮಾಜಿ ಶಾಸಕನ ತೋಟದ ಮನೆಯಲ್ಲಿ ವೃದ್ಧನ ಶವ ಪತ್ತೆ

ಬೇತಮಂಗಲ: ಬಿಜೆಪಿ ಮುಖಂಡ, ಮಾಜಿ ಶಾಸಕ ವೈ. ಸಂಪಂಗಿ ಅವರ ನಾಗಶೆಟ್ಟಿಹಳ್ಳಿ ಬಳಿಯ ತೋಟದ ಮನೆ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ವ್ಯಕ್ತಿಯನ್ನು ಟಿ. ಗೊಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೋದಿನಾಯಕನಹಳ್ಳಿ ತಾಯಲೂರಪ್ಪ (60) ಎಂದು ಗುರ್ತಿಸಲಾಗಿದೆ. ಮೃತದೇಹ ಪತ್ತೆಯಾಗಿರುವ ಈ ತೋಟದ ಮನೆಯಲ್ಲಿ ಬುಧವಾರ ರಾತ್ರಿ ಸಂಪಂಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದರು. ರಾತ್ರಿ ನಡೆದ ಔತಣಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕೂಡ ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ.







































error: Content is protected !!
Scroll to Top