ಎರಡು ತಿಂಗಳಲ್ಲಿ ಬಿಯರ್‌ ಭರ್ಜರಿ ಮಾರಾಟ!

ಬೆಂಗಳೂರು : ಕೊರೊನ ಇರಲಿ, ಹಣಕಾಸಿನ ಸಂಕಷ್ಟವೇ ಇರಲಿ ಕುಡುಕರಿಗೆ ಇವೆಲ್ಲ ಲೆಕ್ಕಕ್ಕಿಲ್ಲ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಾಗಿರುವ ದಾಖಲೆಯೇ ಇದಕ್ಕೆ ಸಾಕ್ಷಿ. ಅದರಲ್ಲೂ ಎರಡು ತಿಂಗಳಲ್ಲಿ ಬಿಯರ್‌ ಮಾರಾಟ ದುಪ್ಪಟ್ಟಾಗಿದೆ ಎಂದು ಸರಕಾರಿ ದಾಖಲೆಗಳು ಹೇಳುತ್ತಿವೆ.
ರಾಜ್ಯ ಅಬಕಾರಿ ಇಲಾಖೆ ಅಂಕಿಅಂಶದ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ (2022-23) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಯರ್ ಮಾರಾಟ ಹಿಂದಿನ ಹಣಕಾಸು ವರ್ಷ 2021-22ಕ್ಕೆ ಈ ಎರಡು ತಿಂಗಳುಗಳಿಗೆ ಹೋಲಿಸಿದರೆ ಶೇ.114.53ರಷ್ಟು ಹೆಚ್ಚಳವಾಗಿದೆ. ಭಾರತೀಯ ನಿರ್ಮಿತ ಮದ್ಯ( IML) ಹಿಂದಿನ ಹಣಕಾಸು ವರ್ಷದ ಎರಡು ತಿಂಗಳಿಗೆ ಹೋಲಿಸಿದರೆ ಈ ಪ್ರಸಕ್ತ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಶೇ. 12.21ರಷ್ಟು ಹೆಚ್ಚಳವಾಗಿದೆ
ಕಳೆದ ಎರಡು ತಿಂಗಳಲ್ಲಿ ಅಬಕಾರಿ ಇಲಾಖೆಯು 4,678.66 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಿದೆ. ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲಿ ಬಿಯರ್ ಮಾರಾಟ ಗರಿಗೆದರಿದೆ. ಬಲ್ಲ ಮೂಲಗಳ ಪ್ರಕಾರ, ಉತ್ತರ ಕರ್ನಾಟಕದ ಯಾದಗಿರಿ ಮತ್ತು ಕಲಬುರಗಿ ಮತ್ತು ದಕ್ಷಿಣ ಕರ್ನಾಟಕದ ಮಂಡ್ಯದಲ್ಲಿ ಬಿಯರ್ ಮಾರಾಟವು ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ಗಿಂತ ಹೆಚ್ಚಾಗಿದೆ.ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮದುವೆ ಮತ್ತಿತರ ಶುಭ ಕಾರ್ಯಗಳು ಮತ್ತು ಹಬ್ಬಹರಿದಿನಗಳು ಹೆಚ್ಚು ಇರುವುದು ಹಾಗೂ ಕಡು ಸೆಖೆಯಲ್ಲಿ ಜನ ತಂಪಾದ ಬಿಯರ್‌ ಇಷ್ಟಪಡುವುದು ಮಾರಾಟ ಹೆಚ್ಚಳವಾಗಲು ಕಾರಣ.







































error: Content is protected !!
Scroll to Top