ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದೇಕೆ: ಭಾಗವತ್‌

ನಾಗಪುರ: ಪ್ರತಿಯೊಂದು ಮಸೀದಿಯಲ್ಲಿ ಶಿವಲಿಂಗ ಹುಡುಕುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ವಿಷಯದ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಕಾಶಿ ಹಿಂದುಗಳ ಧಾರ್ಮಿಕ ಅಸ್ಮಿತೆಗೆ ಸಂಬಂಧಿಸಿದ ವಿಚಾರ.ಹಾಗೆಂದು ಪ್ರತಿಯೊಂದು ಮಸೀದಿಯೂ ವಿವಾದದ ಕೇಂದ್ರವಾಗುವ ಅಗತ್ಯವಿಲ್ಲ. ಹೀಗೆ ಹೊಸ ವಿವಾದವನ್ನು ಹುಟ್ಟುಹಾಕುತ್ತಾ ಹೋದರೆ ಅದಕ್ಕೆ ಕೊನೆಯಿರುವುದಿಲ್ಲ ಎಂದಿದ್ದಾರೆ.
ನಾಗಪುರದಲ್ಲಿ ನಡೆದ ಆರ್‌ಎಸ್‌ಎಸ್‌ನ ಅಧಿಕಾರಿ ಶಿಬಿರದ ಸಮಾರೊಪದಲ್ಲಿ ಮಾತನಾಡಿದ ಅವರು, ವಿವಾದಕ್ಕೆ ಸಂಬಂಧಿಸಿದಂತೆ ಈ ಸ್ಪಷ್ಟನೆ ನೀಡಿದ್ದಾರೆ.ಅಯೋಧ್ಯೆ ಆಂದೋಲನದಲ್ಲಿ ಆರ್‌ಎಸ್‌ಎಸ್‌ ಭಾಗವಹಿಸಿದೆ. ಆದರೆ ಇನ್ನು ಮುಂದೆ ಇಂಥ ಆಂದೋಲನದಲ್ಲಿ ಭಾಗವಹಿಸುವುದಿಲ್ಲ ಎಂದು ತೀರ್ಮಾನಿಸಿದ್ದೇವೆ ಎಂದರು.
ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ. ತಿರುಚಿದರೂ ಸತ್ಯ ಹೊರಬರುತ್ತದೆ.ಮುಸ್ಲಿಂ ಆಕ್ರಮಣಕಾರರು ಭಾರತಕ್ಕೆ ಆಗಮಿಸಿದಾಗ ದೇವಾಲಯಗಳ ಮೇಲೆ ದಾಳಿ ಮಾಡಿದ್ದು, ದೇಗುಲಗಳನ್ನು ಮಸೀದಿಯಾಗಿ ಪರಿವರ್ತಿಸಿದ್ದೆಲ್ಲ ನಿಜ.ಇಂಥ ಸಾವಿರಾರು ದೇವಾಲಯ ಮತ್ತು ಮಸೀದಿಗಳು ದೇಶಾದ್ಯಂತ ಇವೆ.ಆದರೆ ಆರ್‌ಎಸ್‌ಎಸ್‌ ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.ಮಂಗಳೂರಿನ ಬಳಿಯಿರುವ ಗುರುಪುರದ ಮಳಲಿಯ ಮಸೀದಿ ವಿವಾದವೂ ಸೇರಿದಂತೆ ಈಗ ಹಲವಾರು ಮಸೀದಿಗಳ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ಭಾಗವತ್‌ ಹೇಳಿಕೆ ಮಹತ್ವ ಪಡೆದುಕೊಂಡಿದೆ.

a href="#" target="_blank">







































error: Content is protected !!
Scroll to Top