ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆ – ರೇಖಾ ಸಿಂಗ್

ರೇವಾ : ಮಧ್ಯಪ್ರದೇಶದ ರೇವಾ ಜಿಲ್ಲೆಯ ಹುತಾತ್ಮ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ. ಈಗ ವೈದ್ಯಕೀಯ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅವರ ತರಬೇತಿಯು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಪ್ರಾರಂಭವಾಗಲಿದೆ. ಮದುವೆಯಾದ ಕೇವಲ 15 ತಿಂಗಳಲ್ಲೇ ರೇಖಾ ಸಿಂಗ್ ಪತಿಯನ್ನು ಕಳೆದುಕೊಂಡಿದ್ದರು. 2020ರ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೇನೆಯೊಂದಿಗೆ ನಡೆದ ಸಂಘರ್ಷದಲ್ಲಿ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ವೀರಮರಣವನ್ನಪ್ಪಿದರು. ಹುತಾತ್ಮಗೊಂಡ ಪತಿಯ ದುಃಖ ಹಾಗೂ ದೇಶಭಕ್ತಿಯಿಂದ ಶಿಕ್ಷಕಿ ಹುದ್ದೆ ತೊರೆದು ಸೇನೆಯಲ್ಲಿ ಅಧಿಕಾರಿಯಾಗಲು ನಿರ್ಧರಿಸಿದ್ದೇನೆ ಎಂದು ಹುತಾತ್ಮ ಯೋಧನ ಪತ್ನಿ ರೇಖಾ ಸಿಂಗ್ ತಿಳಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಯ ತರಬೇತಿಯು ಮೇ 28 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ. ತರಬೇತಿ ಪೂರ್ಣಗೊಂಡ ನಂತರ, ಒಂದು ವರ್ಷದಲ್ಲಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ತಾವು ತಯಾರಿ ನಡೆಸಿರುವುದರ ಬಗ್ಗೆ ರೇಖಾ ಸಿಂಗ್ ವಿವರಣೆ ನೀಡಿದರು.





























































































error: Content is protected !!
Scroll to Top