ಕಾರ್ಕಳ : ನಿಲ್ಲಿಸಿದ್ದ ಸ್ಕೂಟರ್‌ ಕಳವು

ಕಾರ್ಕಳ : ಪುರಸಭಾ ಕಚೇರಿ ಮುಂಭಾಗ ಶ್ರೀನಿವಾಸ್‌ ಗ್ಲಾಸ್‌ ಬಳಿ ನಿಲ್ಲಿಸಿದ್ದ ಸ್ಕೂಟರೊಂದು ಎ. 28ರಂದು ಕಳವಾಗಿದೆ. ಕುಂದಾಪುರ ಅಸೋಡುವಿನ ಪ್ರಭಾಕರ ಎಂಬವರು ತಮ್ಮ ಹೋಂಡಾ ಡಿಯೋ ಡಿಎಲ್‌ಎಕ್ಸ್ ಸ್ಕೂಟರನ್ನು ನಿಲ್ಲಿಸಿ ಕೀಯನ್ನು ಅದರಲ್ಲೇ ಬಿಟ್ಟು ಗ್ಲಾಸ್‌ ಅಂಗಡಿಗೆ ತೆರಳಿ ವಾಪಸ್‌ ಸ್ಕೂಟರ್‌ ಬಳಿ ಬಂದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ಸ್ಕೂಟರ್‌ ಮೌಲ್ಯ 40 ಸಾವಿರ ರೂ. ಆಗಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































































































error: Content is protected !!
Scroll to Top