ಮೇ. 3 : ಕೆರ್ವಾಶೆಯಲ್ಲಿ ಶ್ರೀ ದೇವಿ ಮಹಾತ್ಮೆ

ಕಾರ್ಕಳ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ವತಿಯಿಂದ ತಿರ್ತೊಟ್ಟು ʼಸ್ವಾಮಿಕೃಪಾʼ ಮನೆಯ ರಂಗಮಂಟಪದಲ್ಲಿ ಮೇ. 3ರ ರಾತ್ರಿ 9.30ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.
ಈ ಪ್ರಯುಕ್ತ ಅಪರಾಹ್ನ 3.30ಕ್ಕೆ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಳದಿಂದ ಚೆಂಡೆ, ಕೊಂಬು, ವಾದ್ಯ, ಕೀಲುಕುದುರೆ ಮತ್ತು ಭಜನೆಯೊಂದಿಗೆ ದೇವರ ಭವ್ಯವಾದ ಮೆರವಣಿಗೆ ಸಾಗಲಿದೆ. ಸಂಜೆ 6 ಗಂಟೆಯಿಂದ ತೆಳ್ಳಾರು ರಾಘವೇಂದ್ರ ಮಠ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, 8.30ಕ್ಕೆ ಚೌಕಿ ಪೂಜೆ ಜರಗಲಿದ್ದು, ಅನಂತರ ಅನ್ನಪ್ರಸಾದ ನಡೆಯಲಿರುವುದು. ಮೇ. 8ರಂದು ಗುಳಿಗ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ ನಡೆಯಲಿದೆ ಎಂದು ಸುಗಂಧಿ ಶೆಟ್ಟಿ ಮತ್ತು ಸುಂದರ ಶೆಟ್ಟಿ ತಿಳಿಸಿದ್ದಾರೆ.

ನೇರ ಪ್ರಸಾರ
ರಾತ್ರಿ 9:30ರಿಂದ ನಡೆಯುವ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ನ್ಯೂಸ್‌ ಕಾರ್ಕಳ ಯೂಟ್ಯೂಬ್‌ ಚಾನೆಲ್‌ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಯಕ್ಷಗಾನ ವೀಕ್ಷಣೆಗೆ newskarkala youtube channel subscribe ಮಾಡಬಹುದಾಗಿದೆ.























error: Content is protected !!
Scroll to Top