ಕಾರ್ಕಳ : ನಗರದ ಮಾರ್ಕೆಟ್ ರಸ್ತೆಯ ರಾಧಿಕಾ ಚಿತ್ರಮಂದಿರದಲ್ಲಿ ಎ. 29 ರಿಂದ ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ತುಳುಚಿತ್ರ ಮಗನೇ ಮಹಿಷ ಪ್ರದರ್ಶನಗೊಳ್ಳುತ್ತಿದೆ. ಡಾ. ದೇವಿದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಪ್ರಧಾನ ಪಾತ್ರದಲ್ಲಿದ್ದು, ಜ್ಯೋತಿ ರೈ, ಶಿವಧ್ವಜ್, ವಿಕ್ರಮ್ ಮಾಡ, ಶೋಭರಾಜ್ ಪಾವೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಅವಿನಾಶ್ ರೈ ನೀನಾಸಂ, ರಾಘವೇಂದ್ರ ರೈ, ಚೈತ್ರಾ ಶೆಟ್ಟಿ ಅಭಿನಯಿಸಿದ್ದಾರೆ.
ಪ್ರತಿದಿನ 4 ದೇಖಾವೆಗಳಿದ್ದು ಬೆಳಿಗ್ಗೆ 10 ಗಂಟೆ, ಮಧ್ಯಾಹ್ನ 1 ಗಂಟೆ. ಸಂಜೆ 4 ಹಾಗೂ 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಧಿಕಾ ಚಿತ್ರಮಂದಿರದಲ್ಲಿ ಮಗನೇ ಮಹಿಷ ತುಳು ಚಿತ್ರ ಪ್ರದರ್ಶನ – ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ
Recent Comments
ಕಗ್ಗದ ಸಂದೇಶ
on