ಎ. 16 : ಉಚಿತ ಗಂಟಲು, ಧ್ವನಿ ತಪಾಸಣಾ ಶಿಬಿರ

ಕಾರ್ಕಳ : ವಿಶ್ವ ಧ್ವನಿ ದಿನಾಚರಣೆಯ ಅಂಗವಾಗಿ ಎ. 11 ರಿಂದ ಎ. 13 ರವರೆಗೆ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ, ಧ್ವನಿ ಸಂಬಂಧಿ ಸಮಸ್ಯೆ ಉಳ್ಳವರಿಗೆ ಉಚಿತವಾಗಿ ಗಂಟಲು ಮತ್ತು ಧ್ವನಿಯ ತಪಾಸಣೆ ಶಿಬಿರವು ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ, ಮಧ್ಯಾಹ್ನ 2. 00 ರಿಂದ 4. 00ರ ವರೆಗೆ ಜರುಗಲಿರುವುದು.
ವಾಕ್ ಮತ್ತು ಶ್ರವಣ ವಿಭಾಗ ತಜ್ಞ ಕೆ.ಎಂ.ಸಿ. ಮಣಿಪಾಲದ ಸಹಾಯಕ ಪ್ರಾಧ್ಯಾಪಕ ಡಾ. ರಾಕೇಶ್ ಸಿ.ವಿ. ಮತ್ತು ಕಿವಿ, ಮೂಗು, ಗಂಟಲು ತಜ್ಞೆ ಡಾ. ಅನುಷಾ ಶೆಟ್ಟಿ ತಪಾಸಣೆ ನಡೆಸಲಿರುವರು. ಯಕ್ಷಗಾನ ಕಲಾವಿದರು, ಸಂಗೀತಗಾರರು, ಅಧ್ಯಾಪಕರು, ಬಸ್ ಕಂಡಕ್ಟರ್ ಮತ್ತು ಗಂಟಲು ನೋವು, ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವಂತಹ ಅನುಭವ, ನಿರಂತರವಾಗಿ ಮಾತನಾಡುವಾಗ ಆಯಾಸ, ಬಾಯಿಯಲ್ಲಿ ಕಹಿ ಅನುಭವ ಮತ್ತು ಧ್ವನಿಗೆ ಸಂಬಂಧಿಸಿದ ಇತರ ಸಮಸ್ಯೆಗಳು ಇರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ದೂ: 9731601145 ಸಂಪರ್ಕಿಸಬೇಕಾಗಿ ಆಸ್ಪತ್ರೆಯ ಸಿಬ್ಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































































error: Content is protected !!
Scroll to Top