ಕಾರ್ಕಳ : ಜೋಡುರಸ್ತೆಯ ಪ್ರೈಮ್ ಮಾಲ್ ಬಳಿ ಕಳೆದ 12 ವರ್ಷಗಳಿಂದ ಸರಕಾರದ ಮಾನ್ಯತೆ ಪಡೆದು ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಡಾಟ್ ನೆಟ್ ಕಂಪ್ಯೂಟರ್ ಎಜುಕೇಶನ್ ಮತ್ತು ಡಿಟಿಪಿ ಸೆಂಟರ್, ಕಂಪ್ಯೂಟರ್ ತರಬೇತಿಯನ್ನು ನೀಡುತ್ತಿದೆ.
ಕರ್ನಾಟಕ ಸರಕಾರದ ಕೌಶಲ್ಯ ಮಿಷನ್, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಇದರ ಮಾನ್ಯತೆ ಪಡೆದು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಕಂಪ್ಯೂಟರ್ ಸಂಬಂದಿಸಿದ ಎಲ್ಲ ರೀತಿಯ ತರಬೇತಿಗಳನ್ನು ರಿಯಾಯಿತಿ ದರದಲ್ಲಿ ಅನುಭವಿ ಶಿಕ್ಷಕರಿಂದ ಕಲ್ಪಿಸಿ, ತರಬೇತಿಯ ನಂತರದಲ್ಲಿ ಸರಕಾರದ ಮಾನ್ಯತೆ ಹೊಂದಿರುವ ಸರ್ಟಿಫಿಕೆಟ್‌ಗಳನ್ನು ನೀಡಲಾಗುವುದು. ಸರಕಾರದ ಪ್ರಾಯೋಜಕತ್ವದ ಜಿ.ಎಸ್.ಟಿ ಅಕೌಂಟ್ಸ್ (GST Accounts) ಹಾಗೂ ಡೊಮೆಸ್ಟಿಕ್ ಡಾಟಾ ಎಂಟ್ರಿಗಳಂತಹ ಕಂಪ್ಯೂಟರ್ ಕೋರ್ಸ್ ಗಳ ಸಂಪೂರ್ಣ ಉಚಿತ ತರಬೇತಿ ನೀಡಲಾಗುವುದು. ತರಬೇತಿಯ ಬಳಿಕ ಕೆ.ಎಸ್.ಡಿ.ಎಲ್. ವತಿಯಿಂದ ಅರ್ಹತಾ ಪ್ರಮಾಣ ಪತ್ರ ನೀಡಲಾಗುವುದು ಅಲ್ಲದೆ ಉದ್ಯೋಗವನ್ನು ಕಲ್ಪಿಸಲಾಗುತ್ತದೆ.
ತರಬೇತಿಗಳ ವಿವರ
ಯೂಟ್ಯೂಬ್ ಕೋರ್ಸ್ಗಳು (ಯಾಡ್ ಪ್ರಮೋಷನ್), ಸೋಶಿಯಲ್ ಮೀಡಿಯಾ ಎಡ್ವರ್ಟೈಸ್ಮೆಂಟ್, ಇ-ಮೈಲ್ ಮಾರ್ಕೆಟಿಂಗ್, ಗೂಗಲ್ ಎನಾಲೆಟಿಕಲ್ ಪವರ್ ಪ್ರೋಗ್ರಾಂ, ವೆಬ್ ಡಿಸೈನಿಂಗ್, ಕಂಟೆಂಟ್ ಮಾರ್ಕೆಟಿಂಗ್, ಎಸ್‌ಇಓ ಫೋರ್ ಬಿಗಿನರ್ಸ್, ಎಡ್ವಾನ್ಸ್ ಕನ್ಟೆಂಟ್ ಮಾರ್ಕೆಟಿಂಗ್, ಎಸ್‌ಇಓ ಟೂಲ್ಸ್ ಮತ್ತು ಸರ್ವೀಸಸ್, ಓನ್ಲೈನ್ ಮಾರ್ಕೆಟಿಂಗ್ ಟೂಲ್ಸ್, ಡಿಜಿಟಲ್ ಮಾರ್ಕೆಟಿಂಗ್‌ನಂತಹ ಆಧುನಿಕ ಕೋರ್ಸ್ಗಳನ್ನು ಸಂಸ್ಥೆಯಲ್ಲಿ ನುರಿತ ಅನುಭವಿ ಶಿಕ್ಷಕರಿಂದ ಕಲಿಸಿಕೊಡಲಾಗುವುದು. ಬೇಸಿಗೆ ಶಿಬಿರದಲ್ಲಿ ಶಾಲಾ ಶಿಕ್ಷಕರಿಂದ, ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುವುದು.
ಆಸಕ್ತರು ಸಂಸ್ಥೆಯ ಆಡಳಿತ ನಿರ್ದೇಶಕರ ಮೊಬೈಲ್ ಸಂಖ್ಯೆ 9341135799 ಗೆ ಸಂಪರ್ಕಿಸಬಹುದಾಗಿದೆ.
























