ಎಳ್ಳಾರೆ : ಹೆಬ್ಬಾರ್ ಜಡ್ಡು ಎಂಬಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಮಾ. 30ರಂದು ನಡೆಯಿತು. ಬಳಿಕ ಗ್ರಾಮಸ್ಥರ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕಡ್ತಲ ಗ್ರಾ.ಪಂ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್, ಉಪಾಧ್ಯಕ್ಷ ಸತೀಶ್ ಪೂಜಾರಿ, ಕರಾವಳಿ ಪ್ರಾಧಿಕಾರದ ಸದಸ್ಯ ಸಂಜೀವ ಪೂಜಾರಿ, ಅಜೆಕಾರು ವ್ಯವಸಾಯ ಬ್ಯಾಂಕ್ ಉಪಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ದೊಂಡೆರಂಗಡಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯೆ ಚಂದ್ರಿಕಾ ಕಿಣಿ, ಹೆಬ್ರಿ ವೈದ್ಯಾಧಿಕಾರಿ ರಮಾ ಮಣಿ, ಕಡ್ತಲ ಪಂಚಾಯತ್ ಪಿಡಿಓ ಸುದರ್ಶನ್, ಸಿಬ್ಬಂದಿ ವರ್ಗ, ಎನ್.ಸಿ.ಡಿ.ಸಿ. ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
























