ನವದೆಹಲಿ: ಬಂಗಾಳ ಕೊಲ್ಲಿಯನ್ನು ಸಂಪರ್ಕ, ಸಮೃದ್ಧಿ ಮತ್ತು ಭದ್ರತೆಯ ಸೇತುವೆಯನ್ನಾಗಿಸುವ ಕರೆಯನ್ನು ಪ್ರಧಾನಿ ಮೋದಿ ನೀಡಿದರು.
ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ಪ್ರಧಾನಿ ಮೋದಿ, ಪ್ರಸಕ್ತ ಸಂದರ್ಭದಲ್ಲಿದಲ್ಲಿ ಪ್ರಾದೇಶಿಕ ಸಹಕಾರ ಎಂಬುದು ಆದ್ಯತೆಯಾಗಿದೆ ಅವರು ತಿಳಿಸಿದರು. ಯುರೋಪ್‌ನ ಇತ್ತೀಚಿನ ಬೆಳವಣಿಗೆಗಳು ಅಂತರಾಷ್ಟ್ರೀಯ ಕ್ರಮದ ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಬಿಮ್‌ಸ್ಟೆಕ್ ಪ್ರಾದೇಶಿಕ ಸಹಕಾರವನ್ನು ಹೆಚ್ಚು ಕ್ರಿಯಾಶೀಲವಾಗಿಸುವುದು ಮುಖ್ಯವಾಗಿದೆ. ಈ ಮಹತ್ವದ ಶೃಂಗಸಭೆಯು ಬಿಮ್‌ಸ್ಟೆಕ್‌ನ ಐಹಿತ್ಯದಲ್ಲಿ ಚಿನ್ನದ ಅಧ್ಯಾಯವನ್ನು ಕೆತ್ತಲಿದೆ ಎಂದು ಅವರು ಹೇಳಿದರು.
ವ್ಯಾಪಾರವನ್ನು ಹೆಚ್ಚಿಸಲು ಬಿಮ್‌ಸ್ಟೆಕ್ ಮುಕ್ತ ವ್ಯಾಪಾರ ಒಪ್ಪಂದದ ಪ್ರಸ್ತಾವನೆಯಲ್ಲಿ ಶೀಘ್ರ ಪ್ರಗತಿ ಸಾಧಿಸುವುದು ಅಗತ್ಯ. ಬಿಮ್‌ಸ್ಟೆಕ್‌ಗೆ ಒಳಪಟ್ಟ ದೇಶಗಳ ಉದ್ಯಮಿಗಳು ಮತ್ತು ಸ್ಟಾರ್ಟಪ್‌ಗಳ ನಡುವಿನ ವಿನಿಮಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.