ನವದೆಹಲಿ: ಕೊಂಕಣ ರೈಲ್ವೆಯು 100 % ಗಳಷ್ಟು ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ಸುಸ್ಥಿರ ಅಭಿವೃದ್ಧಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಎಂದು ಮೋದಿ ತಿಳಿಸಿದ್ದಾರೆ.
ಕೊಂಕಣ ರೈಲ್ವೆ ಕಾರ್ಪೊರೇಷನ್, ಮಹಾರಾಷ್ಟ್ರದ ರೋಹಾ ಮತ್ತು ಕರ್ನಾಟಕದ ಥೋಕೂರ್ ಮಧ್ಯೆ 741 ಕಿಮೀ ಮಾರ್ಗದ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
ಈ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಟ್ವಿಟ್ ಮಾಡಿರುವ ಮೋದಿ, ಮಿಷನ್ 100% ವಿದ್ಯುದೀಕರಣದ ಅಮೋಘ ಯಶಸ್ಸಿಗಾಗಿ, ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಹೊಂದಿಸಿದಕ್ಕಾಗಿ ಕೊಂಕಣ ರೈಲ್ವೆ ತಂಡಕ್ಕೆ ಅಭಿನಂದನೆಗಳನ್ನು ಹೇಳಿದ್ದಾರೆ.
ಈ ವಿದ್ಯುದೀಕರಣದಿಂದಾಗಿ ಇಂಧನದ ಮೇಲೆ 150 ಕೋಟಿ ರೂಪಾಯಿಗಳ ಉಳಿತಾಯವಾಗುವ ಸಾಧ್ಯತೆ ಇದೆ. ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ತಡೆರಹಿತ ಮತ್ತು ಮಾಲಿನ್ಯ-ಮುಕ್ತ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.
ಕೊಂಕಣ ರೈಲ್ವೆಯಿಂದ 100% ವಿದ್ಯುದ್ದೀಕರಣ ಪೂರ್ಣ : ಪ್ರಧಾನಿ ಮೋದಿ ಮೆಚ್ಚುಗೆ
Recent Comments
ಕಗ್ಗದ ಸಂದೇಶ
on