ಹೆಬ್ರಿ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹೆಬ್ರಿ ಘಟಕದ ಉದ್ಘಾಟನೆ ಶ್ರೀ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಫೆಬ್ರವರಿ 19 ರಂದು ಸಂಜೆ 3.30ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಿಮರ್ಶಕ ಅಂಬಾತನಯ ಮುದ್ರಾಡಿ ಘಟಕವನ್ನು ಉದ್ಘಾಟಿಸಿ ಮಾರ್ಗದರ್ಶನ ನೀಡಲಿರುವರು. ಹೆಬ್ರಿ ಘಟಕದ ನೂತನ ಅಧ್ಯಕ್ಷರಾಗಿ ನವೀನ್ ಕೆ. ಅಡ್ಯಂತಾಯ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಬೈಂದೂರು ಆಶಯ ನುಡಿ ಸಲ್ಲಿಸುವರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಗನ್ನಾಥ ಪನ್ಸಾಲೆ ಜನವಾಡ, ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಪ್ರಮುಖರಾದ ಎಚ್. ಪ್ರವೀಣ್ ಬಲ್ಲಾಳ್, ಎಚ್. ಭಾಸ್ಕರ ಜೋಯಿಸ್, ಎಚ್. ಸತೀಶ್ ಪೈ ಉಪಸ್ಥಿತರಿರುವರು.
ನೂತನ ಘಟಕದ ಪದಾಧಿಕಾರಿಗಳ ವಿವರ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ಘಟಕದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ, ಉಪಾಧ್ಯಕ್ಷ ಟಿ.ಜಿ.ಆಚಾರ್ಯ, ಮಹಿಳಾ ಉಪಾಧ್ಯಕ್ಷೆ ಸುನೀತಾ ಅರುಣ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಹೆಬ್ಬಾರ್ ಕಾಪೋಳಿ ಕಬ್ಬಿನಾಲೆ, ಕೋಶಾಧ್ಯಕ್ಷ ಎಚ್. ಜನಾರ್ಧನ್ ಹೆಬ್ರಿ, ಸಹ ಕಾರ್ಯದರ್ಶಿ ನಿತೀಶ್. ಎಸ್. ಪಿ, ಸಂಘಟನಾ ಕಾರ್ಯದರ್ಶಿ ಬೇಳಂಜೆ ಹರೀಶ ಪೂಜಾರಿ, ಸಂಚಾಲಕ ಪ್ರವೀಣ್ ಸೂಡ ಕೆರೆಬೆಟ್ಟು, ಮಹಿಳಾ ಸಂಚಾಲಕಿ ಸುನಂದ ಕುಲಾಲ್ ಶಿವಪುರ, ನಿರ್ದೇಶಕ ಶಿಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ, ಅಶೋಕ್ ಪ್ರಭು ಹೆಬ್ರಿ, ಬಲ್ಲಾಡಿ ಚಂದ್ರಶೇಖರ ಭಟ್, ಶಶಿಕಲಾ ಪೂಜಾರಿ ಚಾರ, ಸುಜಾತ ಶೆಟ್ಟಿ ಕುಚ್ಚೂರು, ಸುಧಾ ಜಿ. ನಾಯಕ್ ಚಾರ ಮತ್ತು ಅಕ್ಷಿತಾ ಕೆ. ಶೆಟ್ಟಿ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.