Wednesday, January 26, 2022
spot_img
Homeಸ್ಥಳೀಯ ಸುದ್ದಿಪಂಜಾಬ್‌ ಭದ್ರತಾ ವೈಫಲ್ಯ : ಪಂಚ ರಾಜ್ಯ ಚುನಾವಣೆ ಎದುರಿಸಲು ಬಿಜೆಪಿ ನಡೆಸಿದ ಪೂರ್ವ ತಯಾರಿ-...

ಪಂಜಾಬ್‌ ಭದ್ರತಾ ವೈಫಲ್ಯ : ಪಂಚ ರಾಜ್ಯ ಚುನಾವಣೆ ಎದುರಿಸಲು ಬಿಜೆಪಿ ನಡೆಸಿದ ಪೂರ್ವ ತಯಾರಿ- ಬಿಪಿನ್‌ ಚಂದ್ರ ಪಾಲ್‌

ಕಾರ್ಕಳ : ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಸಂದರ್ಭ ನಡೆದ ಸೆಕ್ಯುರಿಟಿ ಬ್ರೀಚ್ ಪ್ರಕರಣ ಮುಂಬರುವ ಪಂಚ ರಾಜ್ಯ ಚುನಾವಣೆಗಳನ್ನು ಎದುರಿಸಲು ಬಿಜೆಪಿ ನಡೆಸಿದ ಪೂರ್ವ ತಯಾರಿಯ ತಾಲೀಮೇ ಹೊರತು ಆ ರಾಜ್ಯ ಸರಕಾರದಿಂದುಂಟಾದ ಭದ್ರತಾ ಲೋಪವಲ್ಲ. ದೇಶದ ಪ್ರಧಾನಿಯ ಭದ್ರತೆಯಲ್ಲಿ ಕಾಂಗ್ರೆಸ್ ಯಾವತ್ತೂ ರಾಜಕೀಯ ಮಾಡದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ 40 ಸೈನಿಕರ ಸಾವಿಗೆ ಕಾರಣವಾದ ತನ್ನದೇ ಸರಕಾರದ ರಾಷ್ಟ್ರೀಯ ಭದ್ರತಾ ವೈಫಲ್ಯವನ್ನು ಕೇವಲ ನೆರೆ ರಾಷ್ಟ್ರದ ಕುಮ್ಮಕ್ಕು ಎಂದು ವ್ಯಾಖ್ಯಾನಿಸಿದ್ದ ಬಿಜೆಪಿ ನಾಯಕರು ಇದೀಗ ಈ ಪ್ರಕರಣವನ್ನು ಕಾಂಗ್ರೆಸ್ ಪಕ್ಷದ ತಾಲಿಬಾನಿ ಸಂಸ್ಕ್ರತಿಯ ಪಿತೂರಿಯೆಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ದೇಶದ ಪ್ರಧಾನಿ ಪಕ್ಷಾತೀತ ನೆಲೆಯಲ್ಲಿ ದೇಶದ ಆಡಳಿತಾತ್ಮಕ ವ್ಯವಸ್ಥೆಗೆ ಸೇರಿದವರಾಗಿರುತ್ತಾರೆ. ಆದರೆ, ಈ ಸಾಂವಿಧಾನಿಕ ಸತ್ಯ ಮಿಥ್ಯಾರೋಪವನ್ನೆ ತಮ್ಮ ರಾಜಕೀಯ ಶಕ್ತಿಯಾಗಿಸಿರುವ ಬಿಜೆಪಿ ನಾಯಕರಿಗೆ ಅರ್ಥ ಆಗಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!