Thursday, December 2, 2021
spot_img
Homeಸುದ್ದಿಮೆರವಣಿಗೆಯ ಡಿಜೆ ಶಬ್ದಕ್ಕೆ 63 ಕೋಳಿಗಳು ಸಾವು ,ಪ್ರಕರಣ ದಾಖಲು

ಮೆರವಣಿಗೆಯ ಡಿಜೆ ಶಬ್ದಕ್ಕೆ 63 ಕೋಳಿಗಳು ಸಾವು ,ಪ್ರಕರಣ ದಾಖಲು

ಭುವನೇಶ್ವರ: ಮದುವೆಯ ಮೆರವಣಿಗೆಯಲ್ಲಿ ಹೊಮ್ಮಿದ ಡಿಜೆ ಶಬ್ದದಿಂದಾಗಿ 63 ಕೋಳಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಮದುವೆ ಮನೆಯವರ ಮೇಲೆ ಪ್ರಕರಣ ದಾಖಲಾಗಿದೆ.

ರವಿವಾರ ಮಧ್ಯರಾತ್ರಿಯ ಸ್ವಲ್ಪ ಮೊದಲು ಪೂರ್ವ ರಾಜ್ಯ ಒಡಿಶಾದಲ್ಲಿರುವ ತನ್ನ ಕೋಳಿ ಫಾರ್ಮ್ ಬಳಿ ಮದುವೆ ಮೆರವಣಿಗೆ ಹಾದುಹೋದಾಗ “ಕಿವಿ ಸೀಳುವ ಶಬ್ದ ಕೇಳಿ ಬಂದಿತ್ತು. ಸಂಗೀತವು ತುಂಬಾ ಗದ್ದಲದಿಂದ ಕೂಡಿದ್ದು ಕೋಳಿಗಳನ್ನು ಭಯಭೀತಗೊಳಿಸುತ್ತಿದ್ದರಿಂದ ಧ್ವನಿಯನ್ನು ಕಡಿಮೆ ಮಾಡಲು ನಾನು ಬ್ಯಾಂಡ್ ನಿರ್ವಾಹಕರನ್ನು ಕೇಳಿದ್ದೆ. ಆದರೆ ಅವರು ನನ್ನ ಮಾತು ಕೇಳದೆ.ಮದುಮಗನ ಸ್ನೇಹಿತರು ನನ್ನನ್ನು ಗದರಿಸಿದರು” ಎಂದು ರಂಜಿತ್ ಕುಮಾರ್ ಪರಿದಾ ತಿಳಿಸಿದರು.

ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಪಶುವೈದ್ಯ ರಂಜಿತ್ ಕುಮಾರ್ ಗೆ ತಿಳಿಸಿದರು. ಮದುವೆಯ ಮನೆಯವರು ಪರಿಹಾರವನ್ನು ನೀಡಲು ನಿರಾಕರಿಸಿದ ನಂತರ ಅವರು ಪೊಲೀಸ್ ದೂರು ದಾಖಲಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!