Thursday, December 2, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ವೈಭವದ ಲಕ್ಷದೀಪೋತ್ಸವ

ಕಾರ್ಕಳ : ವೈಭವದ ಲಕ್ಷದೀಪೋತ್ಸವ

ಕಾರ್ಕಳ : ಪಡುತಿರುಪತಿ ಖ್ಯಾತಿಯ ಚಪ್ಪರ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವವು ನ. 24ರಂದು ವೈಭವ, ಸಡಗರದೊಂದಿಗೆ ಜರಗಿತು. ಪೂರ್ವಾಹ್ನ 9:30ರ ವೇಳೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪಟ್ಟದ ದೇವರಾದ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಉತ್ಸವವು ಜರಗಿತು. ಪಟ್ಟದ ಶ್ರೀ ಶ್ರೀನಿವಾಸ ದೇವರು ಬಂಗಾರದ ಮಂಟಪದಲ್ಲಿ ಹಾಗೂ ಶ್ರೀ ವೆಂಕಟರಮಣ ದೇವರು ಬಂಗಾರದ ಪಲ್ಲಕ್ಕಿಯಲ್ಲಿ ರಥಬೀದಿಯಾಗಿ ವನಭೋಜನಕ್ಕೆ ತೆರಳಿತು. ಈ ವೇಳೆ ಸಾವಿರಾರೂ ಮಂದಿ ಭಕ್ತಾದಿಗಳು ಪಾಲ್ಗೊಂಡರು. ವನಭೋಜನದಲ್ಲಿ ಉಭಯ ದೇವರಿಗೆ ಪಂಚಾಮೃತ ಅಭಿಷೇಕ, ನೈವೇದ್ಯ, ಮಹಾ ಆರತಿಯಾಯಿತು.

ನಗರದ ಮುಖ್ಯರಸ್ತೆ ಬದಿ ನೂರಾರು ಅಂಗಡಿಗಳು ತೆರೆದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿತ್ತು. ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು.

ನ. 25ರ ಗುರುವಾರ ಅವಭ್ರತ ನಡೆಯಲಿದೆ. ಸಂಜೆ 4 ಗಂಟೆಗೆ ಉಭಯ ದೇವರು ಒಂದೇ ಪಲ್ಲಕ್ಕಿಯಲ್ಲಿ ರಥಬೀದಿಯಾಗಿ ರಾಮಸಮುದ್ರ ತೆರಳಿ ಅವಭ್ರತ ಸ್ನಾನಗೈಯಲಿದ್ದಾರೆ. ಈ ವೇಳೆ ಜಿಎಸ್‌ಬಿ ಸಮಾಜ ಬಾಂಧವರು ಓಕುಳಿ ಹಚ್ಚಿ ಸಂಭ್ರಮಿಸುತ್ತಾರೆ. ರಾಮಸಮುದ್ರದಿಂದ ದೇವರು ದೇಗುಲ ಪ್ರವೇಶಿಸಿ, ಪೂಜೆ ಪುರಸ್ಕಾರ ನಡೆಯಲಿರುವುದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!