2 ನೇ ಮದುವೆಗೆ ಕುಟುಂಬ ಸದಸ್ಯರ ಅಡ್ಡಿ: 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ಕಂಬ ಹತ್ತಿ ಕುಳಿತ ತಾತ!


ಧೋಲ್ಪುರ್: 
ಈಗಿನ ಕಾಲದಲ್ಲಿ ಹುಡುಗರಿಗೆ ಒಂದು ಮದುವೆಯಾಗುವುದೇ ದುಸ್ತರವಾಗಿದೆ. ಅಂಥದ್ದರಲ್ಲಿ ತನ್ನ ಕುಟುಂಬ ಸದಸ್ಯರು ತಾನು ಎರಡನೇ ಮದುವೆಯಾಗುವುದಕ್ಕೆ ಅಡ್ಡಿಯಾದರು ಎಂಬ ಕಾರಣಕ್ಕೆ 60 ವರ್ಷದ ವೃದ್ಧನೋರ್ವ 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ಕಂಬ ಹತ್ತಿ ಕುಳಿತ ವಿಲಕ್ಷಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 

ಧೋಲ್ಪುರ್ ಜಿಲ್ಲೆಯ ವೃದ್ಧ ಸೋಬ್ರಾನ್ ಅವರ ಪತ್ನಿ ಮೃತಪಟ್ಟಿದ್ದು, ಎರಡನೇ ಮದುವೆ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ತನ್ನ 5 ಮಕ್ಕಳ ಮುಂದಿಟ್ಟಿದ್ದಾರೆ. ಆದರೆ ಮಕ್ಕಳು ಇದಕ್ಕೆ ಹೆಚ್ಚು ಮಹತ್ವ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ವೃದ್ಧ ಕರೆಂಟ್ ಕಂಬ ಏರಿದ್ದಾನೆ, ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಕೆಳಗೆ ಇಳಿಯುವಂತೆ ಪರಿಪರಿಯಾಗಿ ಮನವಿ ಮಾಡಿದ್ದಾರೆ. 11 ಸಾವಿರ ವೋಲ್ಟೇಜ್ ಇರುವ ಹೈ ಟೆನ್ಶನ್ ವೈರ್ ಇದ್ದರೂ ವಿದ್ಯುತ್ ಕಡಿತವಾಗಿದ್ದರಿಂದ ವೃದ್ಧ ಬದುಕಿ ಉಳಿದಿದ್ದಾನೆ. 

ಇತ್ತ ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಕೂಡಲೇ ವೃದ್ಧನ ಮನೆಯವರಿಗೆ ಮಾಹಿತಿ ರವಾನಿಸಿದ್ದಾರೆ. ಇತ್ತ ಘಟನೆ ಬಗ್ಗೆ ಮಾಹಿತಿ ವಿದ್ಯುತ್ ಇಲಾಖೆಗೂ ತಲುಪಿ ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು. ಕೊನೆಗೆ ಎಲ್ಲರ ಮನವೊಲಿಕೆಗೆ ವೃದ್ಧ ಕರೆಂಟ್ ಕಂಬದಿಂದ ಕೆಳಗಿದಿದ್ದಾರೆ.































































































error: Content is protected !!
Scroll to Top