ಹೆಬ್ರಿ: ಕಾರು ಚಾಲಕ ಆತ್ಮಹತ್ಯೆ

ಹೆಬ್ರಿ, ಡಿ.4 : ಕಾರು ಚಾಲಕ ಜೋಸೆಫ್‌ (54) ಎಂಬವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಸೀತಾನದಿಯಲ್ಲಿ ಸಂಭವಿಸಿದೆ. ಮೂಲತಃ ಕೇರಳದವರಾದ ನಾಡ್ಪಾಲು ಗ್ರಾಮದ ಸೀತಾನದಿ ಜೋಸೆಫ್ ಬುಧವಾರ ಈ ಕೃತ್ಯ ಎಸಗಿದ್ದಾರೆ. ಜೋಸೆಫ್‌ ಹೆಬ್ರಿಯಲ್ಲಿ ಗಣ್ಯರಿಗೆ ಕಾರು ಚಾಲಕರಾಗಿ ದುಡಿಯುತ್ತಿದ್ದರು.
ಜೋಸೆಫ್ ವಿಪರೀತ ಕುಡಿತದ ಚಟಹೊಂದಿದ್ದರು ಹಾಗೂ ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡಿ.2ರಂದು ವಿಪರೀತ ಮದ್ಯಪಾನ ಮಾಡಿ ಮನೆಯಲ್ಲೇ ಮರದ ಜಂತಿಗೆ ನೈಲಾನ್ ಹಗ್ಗ ಕಟ್ಟಿ ನೇಣು ಹಾಕಿಕೊಂಡಿದ್ದಾರೆ. ಹೆಬ್ರಿ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































































error: Content is protected !!
Scroll to Top