ಇಂದಿರಾ ಗಾಂಧಿ ಸಾಧನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ-ಸದಾಶಿವ ದೇವಾಡಿಗ

0

ಕಾರ್ಕಳ : ಬ್ಯಾಂಕ್‌ ರಾಷ್ಟ್ರೀಕರಣದ ಮೂಲಕ ಗರೀಬಿ ಹಠಾವೋ ಕಾರ್ಯಕ್ರಮಕ್ಕೆ ಶಕ್ತಿ ನೀಡಿ ಸ್ವತಂತ್ರ ಭಾರತದ ಸಾಮಾಜಿಕ ವ್ಯವಸ್ಥೆಗೆ ಹೊಸ ಆಯಾಮ ಒದಗಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸಾಧನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ದೇವಾಡಿಗ ಹೇಳಿದರು.
ಅವರು ನ. 19ರಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯ ಕೌನ್ಸಿಲ್‌ ಹಾಲ್‌ನಲ್ಲಿ ನಡೆದ ಇಂದಿರಾ ಜನ್ಮದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿರಾ ಗಾಂಧಿಯವರ ಆಡಳಿತ, ಜನ ಕಲ್ಯಾಣಕ್ಕೆ ತಂದ ಯೋಜನೆಗಳ ಕುರಿತು ಪ್ರಚಾರ ನಡೆಸಿ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ಸದಾಶಿವ ದೇವಾಡಿಗ ಕರೆ ನೀಡಿದರು.

ವಿಶ್ವ ಮಾನ್ಯತೆ

ಕಾಂಗ್ರೆಸ್‌ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ, ಜವಾಹರಲಾಲ್ ನೆಹರೂರವರ ಪಂಚಶೀಲ ತತ್ವ, ಆಲಿಪ್ತನೀತಿ, ಧರ್ಮ ನಿರಪೇಕ್ಷತೆಯಂತ ರಾಜಕೀಯ ತತ್ವ ಸಿದ್ಧಾಂತಗಳ ಅನುಕರಣೆ, ಸಾಧನೆಯ ಛಲದಿಂದಾಗಿ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿ ವಿಶ್ವ ಮಾನ್ಯತೆ ಪಡೆಯುವಂತಾಯಿತು ಎಂದರು.
ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಸುಶಾಂತ್‌, ಬ್ಲಾಕ್‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾರ್ಜ್‌ ಕ್ಯಾಸ್ತಲೀನೋ ಇಂದಿರಾ ಗಾಂಧಿ ಕುರಿತು ಮಾತನಾಡಿದರು.
ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಕೆಪಿಸಿಸಿ ಕೃಷಿ ಘಟಕದ ಕಾರ್ಯದರ್ಶಿ ಉದಯಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಸುಬೀತ್ ಕುಮಾರ್, ಪುರಸಭಾ ಸದಸ್ಯ ಶುಭದಾ ರಾವ್, ಜಿಲ್ಲಾ ಐಟಿ ಸೆಲ್‌ ಅಧ್ಯಕ್ಷ ಸತೀಶ್‌ ಪೂಜಾರಿ, ಮಾಜಿ ಪುರಸಭಾ ಸದಸ್ಯ ನವೀನ ದೇವಾಡಿಗ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೊಟ್ಟೆ, ನಗರ ಮಹಿಳಾ ಅಧ್ಯಕ್ಷೆ ಕಾಂತಿ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶೋಭ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.

Previous articleಕ್ರಿಕೆಟ್ ಕಿಂಡಿ- ನಾನಾ ಕಾಕಾ ಪತ್ತೆ ಮಾಡದಿದ್ದರೆ ಗವಾಸ್ಕರ್‌ ಮೀನುಗಾರನಾಗುತ್ತಿದ್ದರು
Next articleಆರೋಗ್ಯಧಾರಾ – ಕಫ ಪ್ರಕೃತಿ ವ್ಯಕ್ತಿಯನ್ನು ಕಾಡುವ ಸಮಸ್ಯೆ ಹಾಗೂ ಅದರ ಪರಿಹಾರಗಳು

LEAVE A REPLY

Please enter your comment!
Please enter your name here