ಕ್ರಿಕೆಟ್ ಕಿಂಡಿ- ನಾನಾ ಕಾಕಾ ಪತ್ತೆ ಮಾಡದಿದ್ದರೆ ಗವಾಸ್ಕರ್‌ ಮೀನುಗಾರನಾಗುತ್ತಿದ್ದರು

ಹುಟ್ಟಿದ ಎರಡನೇ ದಿನಕ್ಕೆ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಾಯಿಯಿಂದ ದೂರವಾಗಿ ಮೀನುಗಾರ್ತಿಯ ಕೈ ಸೇರಿದ್ದರು. ಅದು ಹೇಗೆ ಅಂದು ಕೇಳಿದರೆ ನಿಜಕ್ಕೂ ಒಂದು ಕ್ಷಣ ಮೈನವಿರೇಳುತ್ತದೆ. ಜುಲೈ 10,1949 ರಂದು ಮುಂಬಯಿಯ ಆಸ್ಪತ್ರೆಯಲ್ಲಿ ಗವಾಸ್ಕರ್ ಜನಿಸಿದ್ದರು.ಅಂದು ತಾಯಿ ಮೀನಲ್ ಮಗ್ಗುಲಲ್ಲಿ ಮಗು ಬೆಚ್ಚನೆ ಮಲಗಿತ್ತು. ಗವಾಸ್ಕರ್ ಹುಟ್ಟಿದ ಮೊದಲ ದಿನವೇ ಅವರ ಅಂಕಲ್ ನಾರಾಯಣ್ ಮಸುರೇಕರ್ ತಂಗಿ ಹಾಗೂ ಮಗುವನ್ನು ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದರು.ನಾರಾಯಣ್ ಮಸುರೇಕರ್ ಗವಾಸ್ಕರ್ ಎಡಕಿವಿಯ ಮೇಲೆ ಸಣ್ಣದೊಂದು ತೂತು ಇರುವುದನ್ನು ಗಮನಿಸಿದ್ದರು.ಅದಾಗಿ ಎರಡು ದಿನಗಳ ನಂತರ ಮೂರನೇ ದಿನ ನಾನಾ ಕಾಕಾ (ಗವಾಸ್ಕರ್ ಪ್ರೀತಿಯಿಂದ ನಾರಾಯಣ್ ಮಸುರೇಕರ್ ಅವರನ್ನು ನಾನಾ ಕಾಕಾ ಎನ್ನುತ್ತಿದ್ದರು) ಮತ್ತೆ ಆಸ್ಪತ್ರೆಗೆ ತೆರಳಿದ್ದರು.ತಾಯಿ ಮಗುವನ್ನು ನೋಡಿದ ನಾನಾ ಕಾಕಾ ಒಮ್ಮೆ ತಬ್ಬಿಬ್ಬಾದರು. ಏಕೆಂದರೆ ಮೀನಲ್ ಮಡಿಲಲ್ಲಿದ್ದ ಮಗು ಗವಾಸ್ಕರ್ ಆಗಿರಲಿಲ್ಲ. ಇಡೀ ಆಸ್ಪತ್ರೆಯಲ್ಲಿ ಎಲ್ಲಾ ನವಜಾತ ಶಿಶುಗಳನ್ನು ಪರಿಶೀಲಿಸಿದಾಗ ಮಗು ಅದಲುಬದಲಾಗಿರುವುದು ತಿಳಿಯಿತು.ಹಸುಳೆ ಗವಾಸ್ಕರ್ ಮೀನುಗಾರ್ತಿಯ ಮಡಿಲಲ್ಲಿ ಮಲಗಿದ್ದರು.ಕಿವಿಯಲ್ಲಿದ್ದ ತೂತಿನ ಗುರುತಿನಿಂದಾಗಿ ನಾನಾ ಕಾಕಾ ಮಗುವನ್ನು ಪತ್ತೆಹಚ್ಚಿದ್ದರು. ಅಸಲಿಗೆ ಆದದ್ದಾದರೂ ಏನು?
ಆಸ್ಪತ್ರೆಯಲ್ಲಿ ಸ್ನಾನಕ್ಕೆ ಒಯ್ಯುವ ವೇಳೆ ನವಜಾತ ಶಿಶುಗಳು ಅದಲುಬದಲಾಗಿದ್ದವು. ಒಂದು ವೇಳೆ ನಾನಾ ಕಾಕಾ ಪತ್ತೆ ಮಾಡದೆ ಇರುತ್ತಿದ್ದರೆ ಸುನಿಲ್ ಗವಾಸ್ಕರ್ ಕ್ರಿಕೆಟ್ ಆಗುವ ಬದಲು ಮೀನು ಮಾರಾಟಗಾರರಾಗುತ್ತಿದ್ದರೋ ಏನೋ!
ಫೋರ್ತ್‌ ಅಂಪಾಯರ್‌















































































error: Content is protected !!
Scroll to Top