ಪ್ರತಿಜ್ಞೆ ಸ್ವೀಕರಿಸಿದ ಮೂರೇ ದಿನದಲ್ಲಿ ಬಿಹಾರದ ಶಿಕ್ಷಣ ಸಚಿವ ರಾಜೀನಾಮೆ

ಪಾಟ್ನ, ನ.19: ಬಿಹಾರದ ಶಿಕ್ಷಣ ಸಚಿವ ಮೇವಾಲಾಲ್‌ ಚೌಧರಿ ಪ್ರತಿಜ್ಞೆ ಸ್ವೀಕರಿಸಿದ ಮೂರೇ ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಚೌಧರಿ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿರುವುದನ್ನು ವಿಪಕ್ಷ ಆರ್‌ ಜೆಡಿ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಚೌಧರಿ ರಾಜೀನಾಮೆ ನೀಡಿದ್ದಾರೆ.
2017ರಲ್ಲಿ ಭಾಗಲ್ಪುರ ಸಬಾರ್‌ ಕೃಷಿ ವಿವಿಯ ಉಪ ಕುಲಪತಿಯಾಗಿದ್ದಾಗ 161 ಸಹಾಯಕ ಉಪನ್ಯಾಸಕರನ್ನು ನೇಮಿಸುವಾಗ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಚೌಧರಿ ಮೇಲಿದೆ. ಅಲ್ಲದೆ ವಿವಿಯ ಒಂದು ಕಟ್ಟಡ ನಿರ್ಮಾಣದಲ್ಲಿ ಭ್ರಷ್ಟಚಾರ ಎಸಗಿದ ಅರೋಪವೂ ಇದೆ. ಇವುಗಳ ವಿಚಾರಣೆ ಬಾಕಿಯಿರುವ ಹೊರತಾಗಿಯೂ ಅವರನ್ನು ಸಚಿವರನ್ನಾಗಿ ಮಾಡಿರುವುದನ್ನು ಆರ್‌ ಜೆಡಿ ರಾಜಕೀಯ ವಿವಾದವನ್ನಾಗಿ ಮಾಡಿತ್ತು.

















































































error: Content is protected !!
Scroll to Top