ಆರೋಗ್ಯಧಾರಾ – ಕಫ ಪ್ರಕೃತಿ ವ್ಯಕ್ತಿಯನ್ನು ಕಾಡುವ ಸಮಸ್ಯೆ ಹಾಗೂ ಅದರ ಪರಿಹಾರಗಳು

ಕಫ ಪ್ರಕೃತಿಯ ಮನುಷ್ಯನಿಗೆ ಕಾಡುವ ಮುಖ್ಯ ಸಮಸ್ಯೆಯೆಂದರೆ ಅಧಿಕ ತೂಕ ಹಾಗೂ ನಿಧಾನತೆ . ಇದನ್ನು ದೂರ ಮಾಡಲು ಉಷ್ಣ, ತೀಕ್ಷ್ಣ ಗುಣವಿರುವ ಆಹಾರ ಹಾಗೂ ತಿಕ್ತರಸ ಅಂದರೆ ಕಹಿ ರಸ ಯುಕ್ತ ಆಹಾರ ಸೇವನೆ ಒಳ್ಳೆಯದು. ಹಾಗಲಕಾಯಿ, ಮೆಂತೆಸೊಪ್ಪು, ಗರಮ್ ಮಸಾಲಾ, ಬೇವಿನ ಎಲೆ, ಕರಿಮೆಣಸು ಸೇವಿಸಿದರೆ ಉತ್ತಮ. ಹದ ಬಿಸಿ ನೀರಿಗೆ ಜೇನುತುಪ್ಪ ಹಾಕಿ ಸೇವಿಸುವುದು ಒಳ್ಳೆಯ ಪರಿಣಾಮ ಬೀರುವುದು.
ಇವರಿಗೆ ಇನ್ನೊಂದು ಕಾಡುವ ಸಮಸ್ಯೆ ಏನೆಂದರೆ ಆಲಸ್ಯ. ಆದ್ದರಿಂದ ಅಧಿಕ ವ್ಯಾಯಾಮ ಮಾಡತಕ್ಕದ್ದು. ಯೋಗ ಪ್ರಾಣಾಯಾಮ ಮಾಡಿದರೆ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಕಫ ಪ್ರಕೃತಿ ವ್ಯಕ್ತಿಗೆ ಸುಂದರವಾದಂತಹ ದೇಹವಿರುವುದು ಸಾಮಾನ್ಯ. ಬೊಜ್ಜು ಹೆಚ್ಚು ಇರುವವರು ಉದ್ವರ್ತನ ಅಂದರೆ ಚೂರ್ಣವನ್ನು ತ್ವಚೆಯ ಮೇಲೆ ತಿಕ್ಕುವುದು. ಉದ್ವರ್ತನ ಮಾಡುವುದರಿಂದ ಕಫ ಮತ್ತು ಕೊಬ್ಬು ಕರಗುತ್ತದೆ. ಇದಕ್ಕೆ ಹುರುಳಿ ಹಿಟ್ಟು ಅತ್ಯುತ್ತಮ ದ್ರವ್ಯ ಎಂದು ಆಯುರ್ವೇದದಲ್ಲಿ ಉಲ್ಲೇಖವಿದೆ. ಕಡ್ಲೆಹಿಟ್ಟು, ಹೆಸರುಕಾಳಿನ ಹಿಟ್ಟು ಕೂಡ ತ್ವಚೆಗೆ ಒಳ್ಳೆಯದು. ಇದರಿಂದ ಕೂಡ ಉದ್ವರ್ತನ ಮಾಡಬಹುದು. ನಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
ಪಂಚಕರ್ಮ ಶೋಧನ ಚಿಕಿತ್ಸೆಯಲ್ಲಿ ವಿಧಿಪೂರ್ವಕ ವಮನ ,ವಿರೇಚನವನ್ನು ಮಾಡುವುದು ಒಳ್ಳೆಯದು. ಇದನ್ನು ಆಯುರ್ವೇದ ಆಚಾರ್ಯರನ್ನು ಕೇಳಿ ತಿಳಿದುಕೊಳ್ಳಿ .ಕೆಲವೊಮ್ಮೆ ಕಫ ಪ್ರಕೃತಿಯ ವ್ಯಕ್ತಿಗೆ ಆ್ಯಸಿಡಿಟಿ ಸಮಸ್ಯೆ ಕಾಡಬಹುದು .
ಶುಷ್ಕ ಆಹಾರ, ಜಿಡ್ಡು ರಹಿತ ಆಹಾರ ಸೇವಿಸುವುದು ಉತ್ತಮ . ಆಸವ ಅರಿಷ್ಟ ಸೇವನೆ ಇವರಿಗೆ ಹಿತಕರ. ಕುಮಾರಿ ಆಸವ, ಲೋಹಾರಿಷ್ಟ, ಕನಕಾಸವ, ವಿಡಂಗಾಸವ, ಆಯುರ್ವೇದ ವೈದ್ಯರನ್ನು ಕೇಳಿ ಸೇವಿಸಿರಿ.
ಕಫ ಪ್ರಕೃತಿಯ ಮನುಷ್ಯನಿಗೆ ನಿದ್ದೆ ಕಡಿಮೆ ಮಾಡಿದಷ್ಟೂ ಆರೋಗ್ಯದಾಯಕ.ಹೆಸರು ಬೇಳೆ ಅಥವಾ ಬಾರ್ಲಿ ನೀರು ಬಿಸಿ ಮಾಡಿ ಕುಡಿಯುವುದು ಬಹಳ ಉತ್ತಮ. ಕಫ ಪ್ರಕೃತಿಯ ಮನುಷ್ಯನಿಗೆ ಜಠರಾಗ್ನಿ ಸಮಸ್ಯೆ ಇರುವುದರಿಂದ ವಾರಕ್ಕೆ ಒಮ್ಮೆ ಉಪವಾಸ ಮಾಡುವುದು ಆರೋಗ್ಯಕರ.
ತ್ವಚೆಯ ಸಮಸ್ಯೆ, ಪ್ರಮೇಹ ,ಫ್ಯಾಟಿ ಲಿವರ್ ಇವರಿಗೆ ಕಂಡು ಬರೋದು ಹೆಚ್ಚು. ಆರೋಗ್ಯಕರ ಜೀವನಶೈಲಿ ಪಾಲಿಸುವುದು ಬಹಳ ಮುಖ್ಯ. ಆದಷ್ಟೂ ಆರೋಗ್ಯಕರ ಆಹಾರವನ್ನು ಸೇವಿಸಿ ಆರೋಗ್ಯದಾಯಕ ಜೀವನ ಶೈಲಿಯನ್ನು ರೂಢಿಸಿ ಕೊಳ್ಳಿ .
ಡಾ. ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು

ಡಾ. ಹರ್ಷಾ ಕಾಮತ್


































































































































































































































































error: Content is protected !!
Scroll to Top